ಕರ್ನಾಟಕ

karnataka

ETV Bharat / international

ಶಾಂತಿ ಒಪ್ಪಂದದ ಬಳಿಕ ಅಫ್ಘನ್​ನಲ್ಲಿ ಮೊದಲ ಭಯಾನಕ ದಾಳಿ: 27 ಮಂದಿ ದುರ್ಮರಣ

ಅಮೆರಿಕ ಹಾಗೂ ತಾಲಿಬಾನ್​ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ ಕಾಬೂಲ್​ನಲ್ಲಿ ಭೀಕರ​ ದಾಳಿ ನಡೆದಿದ್ದು, ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ.

attack on Afghan political rally
ಅಫ್ಘನ್​ನಲ್ಲಿ ದಾಳಿ

By

Published : Mar 6, 2020, 5:36 PM IST

ಕಾಬೂಲ್​: ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ವಿರೋಧ ಪಕ್ಷ ನಡೆಸುತ್ತಿದ್ದ ಸಾರ್ವಜನಿಕ ರ್ಯಾಲಿ ಮೇಲೆ ಗನ್​ಮ್ಯಾನ್​ ಓರ್ವ ಗುಂಡಿನ ಮಳೆಗೆರೆದಿದ್ದು, ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ.

ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯವಾದ ಹಜಾರಸ್ ಜನಾಂಗದ ನಾಯಕ ಅಬ್ದುಲ್ ಅಲಿ ಮಜಾರಿ ಅವರ ಪುಣ್ಯತಿಥಿಯ ಅಂಗವಾಗಿ ವಿರೋಧ ಪಕ್ಷದ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾಳಿ ನಡೆಸಲಾಗಿದ್ದು, ಅನೇಕ ರಾಜಕೀಯ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಮೆರಿಕ ಹಾಗೂ ತಾಲಿಬಾನ್​ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ, ನಗರದಲ್ಲಿ ನಡೆದ ಮೊದಲ ಭೀಕರ​ ದಾಳಿ ಇದಾಗಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಮಕ್ಕಳು-ಮಹಿಳೆಯರೂ ಇದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ತಿಳಿಸಿದ್ದಾರೆ.

ಅಬ್ದುಲ್ ಅಲಿ ಮಜಾರಿ ಅವರು, 1995 ರಲ್ಲಿ ತಾಲಿಬಾನ್​ನಿಂದ ಹತ್ಯೆಗೀಡಾಗಿದ್ದರು.

ABOUT THE AUTHOR

...view details