ನಾಯ್ಪಿಟಾವ್ :ಮ್ಯಾನ್ಮಾರ್‌ನಲ್ಲಿ ಫೆಬ್ರವರಿ 1ರಿಂದ ಈವರೆಗೆ ಮಿಲಿಟರಿ ಆಡಳಿತದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ ಬರೋಬ್ಬರಿ 138 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆ ಮಾಹಿತಿ ನೀಡಿದ್ದು, ರಕ್ತಪಾತವನ್ನು ಖಂಡಿಸಿದೆ.
ನಿನ್ನೆ ಹಾಗೂ ಮೊನ್ನೆ 38 ಜನರನ್ನು ಭದ್ರತಾ ಪಡೆ ಕೊಂದಿದೆ. ಈವರೆಗೆ ಮಕ್ಕಳು, ಮಹಿಳೆಯರು ಸೇರಿ 138 ಮಂದಿ ಅಸುನೀಗಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. 2020ರ ನವೆಂಬರ್ 8 ರಂದು ಹೊರ ಬಂದ ಸಂಸತ್ ಚುನಾವಣಾ ಫಲಿತಾಂಶ ಮ್ಯಾನ್ಮಾರ್‌ನಲ್ಲಿ ಬೆಂಕಿ ಹೊತ್ತಿಸಿದೆ.
ಚುನಾವಣೆಯಲ್ಲಿ ಮಾಜಿ ಆಡಳಿತ ಪಕ್ಷವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಶೇ.80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಅಂದಿನಿಂದ ಮ್ಯಾನ್ಮಾರ್‌ನಲ್ಲಿ ಸರ್ಕಾರ ಮತ್ತು ಮಿಲಿಟರಿ ಆಡಳಿತದ ನಡುವೆ ಸಂಘರ್ಷ ನಡೆಯುತ್ತಿದೆ.