ಢಾಕಾ(ಬಾಂಗ್ಲಾದೇಶ) : ಕಳೆದ 2 ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದ 445 ಬಾಂಗ್ಲಾದೇಶಿಗರು ತವರಿಗೆ ಮರಳುತ್ತಿರುವಾಗ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಬಾರ್ಡರ್ ಗಾರ್ಡ್ ಮಹಾನಿರ್ದೇಶಕ ಶಫೀನುಲ್ ಇಸ್ಲಾಂ ತಿಳಿಸಿದ್ದಾರೆ.
2019 ರಲ್ಲಿ ಅಕ್ರಮವಾಗಿ ಭಾರತಕ್ಕೆ ಭೇಟಿ ನೀಡಿದ ನಂತರ ಬಾಂಗ್ಲಾದೇಶಕ್ಕೆ ಮರಳಲು ಪ್ರಯತ್ನಿಸುತ್ತಿರುವಾಗ ಒಟ್ಟು 1,002 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗಡಿ ಹತ್ಯೆಗಳ ಕುರಿತು ಮಾತನಾಡುತ್ತಾ, ಡಿಸೆಂಬರ್ 25 ರಿಂದ 30 ರವರೆಗೆ ನವದೆಹಲಿಯಲ್ಲಿ ಆರು ದಿನಗಳ ಕಾಲ ನಡೆದ 49ನೇ ಡಿಜಿ ಮಟ್ಟದ ಬಿಜಿಬಿ-ಬಿಎಸ್ಎಫ್ ಸಭೆಯಲ್ಲಿ ಗಡಿ ಹತ್ಯೆಗಳ ವಿಷಯದ ಕುರಿತು ಚರ್ಚಿಸಲಾಗಿದೆ. ಹತ್ಯೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದು, 2019ರಲ್ಲೆ ಅತಿಹೆಚ್ಚು ಪಕರಣಗಳು ನಡೆದಿವೆ ಎಂದಿದ್ದಾರೆ.