ಯೆರೆವಾನ್(ಅರ್ಮೇನಿಯಾ): ಅರ್ಮೇನಿಯಾ ದೇಶದ ಪ್ರಧಾನಿ ನಿಕೋಲ್ ಪಶಿನಿಯನ್ ಮತ್ತು ಅವರ ಕುಟುಂಬ ಸದಸ್ಯರಿಗೂ ಕೊರೊನಾ ಸೋಂಕು ದೃಢವಾಗಿದೆ.
"ನನಗೆ ಯಾವುದೇ ರೋಗಲಕ್ಷಣಗಳಿಲ್ಲ. ಆದರೆ, ಕೊರೊನಾ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದೆ" ಎಂದು ಪಶಿನಿಯನ್ ಮಾತನ್ನು BBC ಫೇಸ್‌ಬುಕ್ ಲೈವ್ ವಿಡಿಯೋವೊಂದರಲ್ಲಿ ಉಲ್ಲೇಖಿಸಿದೆ.
ನಾನೂ ಕೂಡಾ ಖಂಡಿತವಾಗಿಯೂ ಐಸೋಲೇಷನ್ನಲ್ಲೇ ಇರುತ್ತೇನೆ. ಇಲ್ಲಿಂದಲೇ ಅಗತ್ಯವಿರುವ ಕೆಲಸ ಮಾಡುತ್ತೇನೆ ಎಂದು ಪಶಿನಿಯನ್ ಹೇಳಿದ್ದಾರೆ. ಅಲ್ಲದೇ ಎಲ್ಲ ಸಮಯದಲ್ಲೂ ಮಾಸ್ಕ್ಗಳನ್ನು ಧರಿಸಿ ನಿಯಮಿತವಾಗಿ ಕೈಗಳನ್ನು ತೊಳೆಯುತ್ತಿರಬೇಕೆಂದು ಪ್ರಧಾನಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಅರ್ಮೇನಿಯಾ ದೇಶದಲ್ಲಿ ಈವರೆಗೆ 9,282 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 3,396 ಮಂದಿ ಗುಣಮುಖರಾಗಿದ್ದಾರೆ. 131 ಜನ ಸಾವನ್ನಪ್ಪಿದ್ದಾರೆ ಎಂದು ಅರ್ಮೇನಿಯಾ ಸರ್ಕಾರ ತಿಳಿಸಿದೆ.