ಕರ್ನಾಟಕ

karnataka

ETV Bharat / international

ಆಫ್ಘನ್​ನಲ್ಲಿ ಹಾವು-ಏಣಿ ಆಟ: ಮೂರು ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಕ್ಕೆ ಪಡೆದ ಆಫ್ಘನ್ ಪಡೆ - ಪೊಲ್​ ಇ ಹೆಸಾರ್- ತಾಲಿಬಾನ್ ಭಯೋತ್ಪಾದಕರು

ತಾಲಿಬಾನಿಗಳಿಂದ ದೆಹ್​ ಸಲಾಹ್ ಮತ್ತು ಖ್ವಸಾನ್ ಜಿಲ್ಲೆಗಳನ್ನು ಆಫ್ಘನ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಆಫ್ಘಾನಿಸ್ತಾದನ ಖಾಮಾ ಪ್ರೆಸ್ ಶುಕ್ರವಾರ ವರದಿ ಮಾಡಿ

Armed uprising recaptures Afghan district from Taliban
ಆಫ್ಘನ್​ನಲ್ಲಿ ಹಾವು-ಏಣಿ ಆಟ: ಮೂರು ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಕ್ಕೆ ಪಡೆದ ಆಫ್ಘನ್ ಪಡೆ

By

Published : Aug 21, 2021, 4:37 AM IST

Updated : Aug 21, 2021, 6:06 AM IST

ಕಾಬೂಲ್, ಅಫ್ಘಾನಿಸ್ತಾನ:ನೆರೆಯ ರಾಷ್ಟ್ರ ತಾಲಿಬಾನ್​ನಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ತಾಲಿಬಾನ್ ಭಯೋತ್ಪಾದಕರಿಂದ ಉತ್ತರ ಬಘ್ಲಾನ್ ಪ್ರಾಂತ್ಯದ ಜಿಲ್ಲೆಯೊಂದನ್ನು ಆಫ್ಘನ್ ಪಡೆ ವಶಕ್ಕೆ ಪಡೆದುಕೊಂಡಿದೆ.

ಉತ್ತರ ಬಘ್ಲಾನ್ ಪ್ರಾಂತ್ಯದ ಪೊಲ್-ಇ- ಹೆಸಾರ್ ಜಿಲ್ಲೆಯನ್ನು ಆಫ್ಘನ್ ಪಡೆಗಳು ತಾಲಿಬಾನಿಗಳಿಂದ ವಶಕ್ಕೆ ಪಡೆದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದ್ದು ಈ ಮೂಲಕ ಆಫ್ಘನ್​ನಲ್ಲಿ ಪಡೆಗಳಲ್ಲಿ ಹುಮ್ಮಸ್ಸು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ತಾಲಿಬಾನಿಗಳಿಂದ ದೆಹ್​ ಸಲಾಹ್ ಮತ್ತು ಖ್ವಸಾನ್ ಜಿಲ್ಲೆಗಳನ್ನೂ ಆಫ್ಘನ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಆಫ್ಘಾನಿಸ್ತಾದನ ಖಾಮಾ ಪ್ರೆಸ್ ಶುಕ್ರವಾರ ವರದಿ ಮಾಡಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮುಹಮ್ಮದಿ ತಾಲಿಬಾನ್ ಉಗ್ರರನ್ನು ಹತ್ತಿಕ್ಕುವುದು ನಮ್ಮ ಕರ್ತವ್ಯ, ತಾಲಿಬಾನ್​ನಿಂದ ಪೊಲ್-ಇ-ಹೆಸಾರ್, ದೆಹ್ ಸಲಾಹ್, ಬೆನೋ ಜಿಲ್ಲೆಗಳನ್ನು ಆಫ್ಘನ್ ಪಡೆಗಳು ವಶಕ್ಕೆ ಪಡೆದಿವೆ' ಎಂದು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಬಿಸ್ಮಿಲ್ಲಾ ಮುಹಮ್ಮದಿ ಇನ್ನೂ ತಾಲಿಬಾನ್ ಅಧೀನಕ್ಕೆ ಒಳಪಡದ ಪಂಜ್​ಶೀರ್ ಪ್ರಾಂತ್ಯದಲ್ಲಿದ್ದು, ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಾಗ ಪಂಜ್​ಶೀರ್ ಪ್ರಾಂತ್ಯಕ್ಕೆ ಪಲಾಯನ ಮಾಡಿದ್ದರು.

ತಾಲಿಬಾನಿಗಳಿಂದ ಆಫ್ಘನ್ ಪಡೆಗಳು ಜಿಲ್ಲೆಗಳನ್ನು ವಶಕ್ಕೆ ಪಡೆಯುವ ವೇಳೆ ಸುಮಾರು 40 ತಾಲಿಬಾನಿಗಳನ್ನು ಕೊಲ್ಲಲಾಗಿದ್ದು, 15 ಮಂದಿಗೆ ಗಾಯಗಳಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇದನ್ನೂ ಓದಿ: Afghanistan Crisis: ಕತಾರ್​ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ ಎಸ್​.ಜೈಶಂಕರ್​​

Last Updated : Aug 21, 2021, 6:06 AM IST

ABOUT THE AUTHOR

...view details