ಅಮೃತಸರ: ಭಾರತದ ಗಡಿ ನಿಯಂತ್ರಣ ರೇಖೆ ಬಳಿ (India-Pak border) ಬಂದಿದ್ದ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಅನ್ನು ಗುಂಡಿನ ದಾಳಿ ಮೂಲಕ ಭದ್ರತಾ ಪಡೆಗಳು ಹಿಮ್ಮೆಟ್ಟಿಸಿರುವ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.
ಗಡಿಗೆ ಬಂದ ಪಾಕಿಸ್ತಾನದ ಡ್ರೋನ್: ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ ಭದ್ರತಾ ಪಡೆ - ಭಾರತ-ಪಾಕಿಸ್ತಾನ ಗಡಿ
ಗಡಿಯಲ್ಲಿ ಪಾಕ್ ಪುಂಡಾಟ ಮುಂದುವರೆದಿದ್ದು, ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿರುವ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ಮೂಲಕ ಡ್ರೋನ್ ಅನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ - ಪಾಕ್ ಗಡಿಯಲ್ಲಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ (drone spotted) ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆಗ ಪಾಕಿಸ್ತಾನದತ್ತ ಡ್ರೋನ್ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಸರ ಜಿಲ್ಲೆಯ ಬಿಂದಿ ಸೈದನ್ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಈ ಡ್ರೋನ್ ಅನ್ನು ಗುರುತಿಸಿದ್ದಾರೆ. ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿದ್ದ ಡ್ರೋನ್ ಸ್ಫೋಟಕಗಳನ್ನು ನೆಲಕ್ಕೆ ಹಾಕಿದೆಯೇ ಎಂದು ಪಂಜಾಬ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಪಂಜಾಬ್‌ನ ಭಾರತ - ಪಾಕಿಸ್ತಾನ ಗಡಿಯಲ್ಲಿ (Ind Pak border) ಡ್ರೋನ್‌ಗಳು ಪತ್ತೆಯಾಗಿದ್ದವು. ಕಳೆದ ಕೆಲವು ತಿಂಗಳುಗಳಿಂದ ಗಡಿಯಾದ್ಯಂತ ಡ್ರೋನ್ ದಾಳಿಗಳ ಕುರಿತು ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.