ಕರ್ನಾಟಕ

karnataka

ETV Bharat / international

ಆಸ್ಟ್ರೇಲಿಯಾ ಓಪನ್.. ಗ್ರ್ಯಾಂಡ್ ಸ್ಲ್ಯಾಮ್ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟ ಭಾರತದ 3ನೇ ಮಹಿಳೆ ಅಂಕಿತಾ ರೈನಾ.. - Sania Mirza and Nirupama Vaidyanathan

ಸಾನಿಯಾ ಮಿರ್ಜಾ ಮತ್ತು ನಿರುಪಮಾ ವೈದ್ಯನಾಥನ್ ಬಳಿಕ ಗ್ರ್ಯಾಂಡ್ ಸ್ಲ್ಯಾಮ್‌ನ ಮುಖ್ಯ ಘಟ್ಟ ತಲುಪಿದ ಭಾರತದ ಮೂರನೇ ಮಹಿಳಾ ಆಟಗಾರ್ತಿ ಅಂಕಿತಾ ರೈನಾ ಆಗಿದ್ದಾರೆ..

Ankita Raina
ಅಂಕಿತಾ ರೈನಾ

By

Published : Feb 7, 2021, 5:12 PM IST

ಮೆಲ್ಬೋರ್ನ್ :ಆಸ್ಟ್ರೇಲಿಯಾ ಓಪನ್‌ನಲ್ಲಿ ಟೆನಿಸ್​ ಡಬಲ್ಸ್​ಗೆ ಭಾರತದ ಅಂಕಿತಾ ರೈನಾ ಪ್ರವೇಶ ಪಡೆದಿದ್ದು, ಗ್ರ್ಯಾಂಡ್ ಸ್ಲ್ಯಾಮ್‌ನ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟ ಭಾರತದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೊಮೇನಿಯಾ ಆಟಗಾರ್ತಿ ಮಿಹೇಲಾ ಬುಜಾರ್ನೆಸ್ಕು ಜೊತೆ ಡಬಲ್ಸ್ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ವೈಲ್ಡ್ ಕಾರ್ಡ್ ಜೋಡಿಯಾಗಿರುವ ಒಲಿವಿಯಾ ಗಡೆಕ್ಕಿ ಮತ್ತು ಬೆಲಿಂಡಾ ವೂಲ್ಕಾಕ್ ವಿರುದ್ಧ ಅಂಕಿತಾ ಮತ್ತು ಮಿಹೇಲಾ ಆಡಲಿದ್ದಾರೆ.

ಅಂಕಿತಾ ರೈನಾ

ಇದನ್ನೂ ಓದಿ:ಇನ್ನೂ 2 ವರ್ಷ ಟೀಂ ಇಂಡಿಯಾಗೆ ನಾನ್​ ಸ್ಟಾಪ್​ ಟೂರ್ನಿ : 2023ರ ವರೆಗೆ ವೇಳಾಪಟ್ಟಿ ಬಿಡುಗಡೆ ಮಾಡಿದ BCCI

ಈ ಮೊದಲು ಗ್ರ್ಯಾಂಡ್ ಸ್ಲ್ಯಾಮ್‌ನ ಮುಖ್ಯ ಘಟ್ಟದಲ್ಲಿ ಟೆನಿಸ್​ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಮತ್ತು ನಿರುಪಮಾ ವೈದ್ಯನಾಥನ್ ಭಾರತ ಪ್ರತಿನಿಧಿಸಿದ್ದರು. ಇದೀಗ ಈ ಸ್ಥಾನ ಪಡೆದ ಭಾರತದ ಮೂರನೇ ಮಹಿಳೆ ಅಂಕಿತಾ ರೈನಾ ಆಗಿದ್ದಾರೆ.

ಕೊರೊನಾ ಸಾಂಕ್ರಾಮಿಕ ಆರಂಭವಾದ ಬಳಿಕ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಸ್ವಾಗತಿಸುತ್ತಿರುವ ಮೊದಲ ಗ್ರ್ಯಾಂಡ್ ಸ್ಲ್ಯಾಮ್ 'ಆಸ್ಟ್ರೇಲಿಯನ್ ಓಪನ್ 2021' ಆಗಿದೆ.

ABOUT THE AUTHOR

...view details