ಅಫ್ಘಾನಿಸ್ತಾನ: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪ್ರತಿರೋಧ ಪಡೆಗಳ ನಡುವಿನ ಭೀಕರ ಕಾಳಗದ ನಡುವೆ, ಅಫ್ಘಾನಿಸ್ತಾನದ ಮಾದಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಾಲಿಬಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಾಲಿಬಾನಿಗಳು ಯುದ್ಧ ಅಪರಾಧಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ತಾಲಿಬಾನಿಗಳು ಜನಾಂಗೀಯ ತಾರತಮ್ಯ ಮಾಡುತ್ತಿದ್ದಾರೆ ಮತ್ತು ಪಂಜಶೀರ್‌ನ ಯುವಕರನ್ನು ಗಣಿ ತೆರವುಗೊಳಿಸುವ ಸಾಧನವಾಗಿ ಬಳಸುತ್ತಿದ್ದಾರೆ. ಫೋನ್ ಲೈನ್‌ಗಳು, ವಿದ್ಯುತ್ ಮತ್ತು ಔಷಧಿಗಳ ಪ್ರವೇಶವನ್ನು ನಿರ್ಬಂಧಿಸುವುದರ ಹೊರತಾಗಿ ಅವರನ್ನು ಗಣಿ ಪ್ರದೇಶಗಳಲ್ಲಿ ನಡೆಯುವ ಕೃತ್ಯ ಎಸಗುತ್ತಿದ್ದಾರೆ ಎಂದು ಸಲೇಹ್ ಹೇಳಿದ್ದಾರೆ.
ವಿಶ್ವಸಂಸ್ಥೆ(UN) ಮತ್ತು ಇತರ ವಿಶ್ವ ನಾಯಕರು ತಾಲಿಬಾನಿಗಳ ಅಪರಾಧಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ತುರ್ತಾಗಿ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.
'ನಾನು ಪಲಾಯನ ಮಾಡಿಲ್ಲ':
ಪ್ರತಿರೋಧ ಪಡೆಗಳು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಅಮರುಲ್ಲಾ ಸಲೇಹ್ ಮತ್ತು ಉತ್ತರ ಒಕ್ಕೂಟದ ನಾಯಕ ಅಹ್ಮದ್ ಮಸೂದ್ ಪಂಜಶೀರ್‌ನಿಂದ ತಜಕಿಸ್ತಾನದಲ್ಲಿ ಆಶ್ರಯ ಪಡೆಯಲು ಇಲ್ಲಿಂದ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಇಬ್ಬರೂ ನಾಯಕರು ಸುರಕ್ಷಿತವಾಗಿದ್ದು, ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರತಿರೋಧ ಪಡೆಗಳು ಪರ್ವಾನ್ ಪ್ರಾಂತ್ಯದ ರಾಜಧಾನಿ ಚರಿಕರ್ ಮತ್ತು ಆಯಕಟ್ಟಿನ ಸ್ಥಳವಾದ ಸಲಾಂಗ್ ಅನ್ನು ತಾಲಿಬಾನ್ ಹಿಡಿತದಿಂದ ಮುಕ್ತಗೊಳಿಸಿವೆ ಎನ್ನಲಾಗಿದೆ. ಸಲಾಂಗ್ ಅಫ್ಘಾನಿಸ್ತಾನ-ಉಜ್ಬೇಕಿಸ್ತಾನ್ ಹೆದ್ದಾರಿಯಲ್ಲಿರುವುದರಿಂದ ಇದು ಪ್ರಮುಖವಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಉತ್ತರ ಪ್ರತಿರೋಧ ಪಡೆಗಳಿಗೆ ಕಾರ್ಯತಂತ್ರದ ಪ್ರಯೋಜನವನ್ನು ಇದು ನೀಡುತ್ತದೆ.