ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ಸೃಷ್ಟಿಸಿರುವ ಪರಿಸ್ಥಿತಿಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಈಗ ಕಾಬೂಲ್ನಲ್ಲಿ ಐಎಸ್-ಕೆ ಸಂಘಟನೆ (ಖೊರೋಸಾನ್ನಲ್ಲಿ ಐಸಿಸ್ ಅನ್ನು ಹೀಗೆ ಕರೆಯಲಾಗುತ್ತದೆ) ನಡೆಸಿದ ದಾಳಿಯನ್ನು ಬಹುತೇಕ ಎಲ್ಲಾ ರಾಷ್ಟ್ರಗಳೂ ಖಂಡಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ಐಎಸ್-ಕೆ ಸಂಘಟನೆ ಕಾಬೂಲ್ನಿಂದ ಕಾರ್ಯಾಚರಣೆ ನಡೆಸುವ ತಾಲಿಬಾನ್ ಮತ್ತು ಹಕ್ಕಾನಿ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ಈಗಿರುವ ಎಲ್ಲಾ ಸಾಕ್ಷ್ಯಗಳು ಬಹಿಂಗಪಡಿಸುತ್ತವೆ.
ಪಾಕಿಸ್ತಾನ ಸರ್ಕಾರ ಕ್ವೆಟ್ಟಾ ಶುರಾ ಭಯೋತ್ಪಾದಕ ಸಂಘಟನೆಯೊಂದಿಗಿನ ಸಂಪರ್ಕವನ್ನು ನಿರಾಕರಿಸುವಂತೆ ತಾಲಿಬಾನಿಗಳು ಐಸಿಸ್ನೊಂದಿಗಿನ ಸಂಬಂಧವನ್ನು ನಿರಾಕರಿಸುತ್ತಾರೆ ಎಂದು ಸಹೇಲ್ ವ್ಯಂಗ್ಯವಾಡಿದ್ದಾರೆ.