ಕರ್ನಾಟಕ

karnataka

ETV Bharat / international

ಅಮೆರಿಕಾದ ಶಸ್ತ್ರಾಸ್ತ್ರ ಲೂಟಿ ಮಾಡಿ ಪಾಕಿಸ್ತಾನಕ್ಕೆ ಪೂರೈಸುತ್ತಿದೆ ತಾಲಿಬಾನ್​! - American weapons looted by Taliban news

ಕಾಶ್ಮೀರ ಕಣಿವೆಯಲ್ಲಿರುವ ಭಾರತೀಯ ಸೇನೆಯ ಭಯೋತ್ಪಾದನಾ ನಿಗ್ರಹ ಜಾಲವು ಭಯೋತ್ಪಾದಕರು ಉತ್ಕೃಷ್ಟ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅದನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಲಿಬಾನ್
ತಾಲಿಬಾನ್

By

Published : Aug 24, 2021, 4:07 PM IST

Updated : Aug 24, 2021, 4:30 PM IST

ನವದೆಹಲಿ:ಆಫ್ಘನ್ ಸೇನೆಯಿಂದ ವಶಪಡಿಸಿಕೊಂಡ ಅಮೆರಿಕದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಪಾಕಿಸ್ತಾನಕ್ಕೆ ಪೂರೈಸುತ್ತಿದೆ ಎಂಬ ಮಾಹಿತಿಯ ನಡುವೆ, ಭಾರತದ ಉನ್ನತ ಮಿಲಿಟರಿ ಅಧಿಕಾರಿಗಳು ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ಐಎಸ್‌ಐ ಭಯೋತ್ಪಾದಕರು ಹಿಂಸಾಚಾರಕ್ಕೆ ಬಳಸಬಹುದು ಎಂದು ಅಂದಾಜಿಸಿದ್ದಾರೆ.

ಭಾರತದಲ್ಲೂ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಈ ಶಸ್ತ್ರಾಸ್ತ್ರಗಳನ್ನು ಒದಗಿಸುವ ನಿರೀಕ್ಷೆಯಿದೆ. ಆದರೆ, ಅವುಗಳನ್ನು ಇಲ್ಲಿ ಆ ಶಸ್ತ್ರಾಸ್ತ್ರ ಬಳಸಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಹಿರಿಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಮೆರಿಕನ್ ಮೂಲದ ಶಸ್ತ್ರಾಸ್ತ್ರಗಳು ವಿಶೇಷವಾಗಿ ಸಣ್ಣ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ ಎಂದು ಸೂಚಿಸುವ ಬಹಳಷ್ಟು ಒಳಹರಿವುಗಳಿವೆ ಎಂದು ಹಿರಿಯ ಮಿಲಿಟರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 20 ವರ್ಷಗಳಲ್ಲಿ ಆಫ್ಘನ್ ಪಡೆಗಳಿಗೆ M-16 ಮತ್ತು M-4 ದಾಳಿ ರೈಫಲ್‌ಗಳನ್ನು ಒಳಗೊಂಡಂತೆ 6.5 ಲಕ್ಷಕ್ಕೂ ಹೆಚ್ಚು ಸಣ್ಣ ಶಸ್ತ್ರಾಸ್ತ್ರಗಳನ್ನು ಅಮೆರಿಕದ ಪಡೆಗಳು ಒದಗಿಸಿವೆ ಎಂದು ಅಂದಾಜಿಸಲಾಗಿದೆ.

ಅಮೆರಿಕನ್ ಸೈನ್ಯ ಉಡುಗೊರೆಯಾಗಿ ಆಫ್ಘನ್ ಪಡೆಗಳಿಗೆ ನೀಡಿದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಗಮನಾರ್ಹ ಸಂಖ್ಯೆಯ ಬುಲೆಟ್ ಪ್ರೂಫ್ ಉಪಕರಣಗಳು ಮತ್ತು ರಾತ್ರಿ ದೃಷ್ಟಿ ಕನ್ನಡಕಗಳನ್ನು ಸಹ ತಾಲಿಬಾನ್​ ಪಡೆದುಕೊಂಡಿದೆ. ಸ್ನೈಪರ್ ರೈಫಲ್‌ಗಳು ಭಯೋತ್ಪಾದಕ ಗುಂಪಿನ ಕೈಗೆ ಸಿಕ್ಕಿವೆ. ಮೂಲಗಳು ಹೇಳುವಂತೆ ಅಮೆರಿಕದ ಸಂವಹನ ಮತ್ತು ರಾತ್ರಿ ದೃಷ್ಟಿ ಉಪಕರಣಗಳ ಲೂಟಿಯ ಮಹತ್ವದ ಭಾಗವು ಪಾಕಿಸ್ತಾನದ ಸೇನೆಗೆ ಪ್ರವೇಶಿಸುವ ಸಾಧ್ಯತೆಯಿದೆ.

ಕಾಶ್ಮೀರ ಕಣಿವೆಯಲ್ಲಿರುವ ಭಾರತೀಯ ಸೇನೆಯ ಭಯೋತ್ಪಾದನಾ ನಿಗ್ರಹ ಜಾಲವು ಭಯೋತ್ಪಾದಕರು ಉತ್ಕೃಷ್ಟ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅದನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಓದಿ:ಕಾಬೂಲ್​ನಿಂದ ಜನರನ್ನು ಸ್ಥಳಾಂತರಿಸುತ್ತಿದ್ದ Ukrainian Plane ಹೈಜಾಕ್​?

Last Updated : Aug 24, 2021, 4:30 PM IST

ABOUT THE AUTHOR

...view details