ಕರ್ನಾಟಕ

karnataka

ETV Bharat / international

ಅಮೆರಿಕ-ಅಫ್ಘನ್ ಜಂಟಿ ಕಾರ್ಯಾಚರಣೆ: ಭಾರತೀಯ ಮೂಲದ ಅಲ್​ ಖೈದ ಉಗ್ರ ಸಾವು! - ಇಸ್ಲಮಾಬಾದ್

ಅಮೆರಿಕ ಮತ್ತು ಅಫ್ಘಾನ್​ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಉಪಖಂಡ ಅಲ್​-ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಸಿಮ್ ಉಮರ್ ಹತನಾಗಿದ್ದಾನೆ.

ಆಸಿಮ್ ಉಮರ್

By

Published : Oct 9, 2019, 10:17 AM IST

ಇಸ್ಲಮಾಬಾದ್: ಭಾರತೀಯ ಉಪಖಂಡ ಅಲ್​-ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಭಾರತೀಯ ಮೂಲದ ಆಸಿಮ್ ಉಮರ್​, ಅಮೆರಿಕ ಮತ್ತು ಅಫ್ಘನ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.

ಅಲ್​-ಖೈದಾ ಉಗ್ರರನ್ನ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಅಫ್ಘಾನ್​ ಸೇನೆ ಜಂಟಿಯಾಗಿ ಅಫ್ಘಾನಿಸ್ತಾನದ ಮುಸ ಖಲ ಜಿಲ್ಲೆಯಲ್ಲಿ ದಾಳಿ ನಡೆಸಿತ್ತು. ಈ ವೇಳೆ 6 ಜನ ಉಗ್ರರೊಂದಿಗೆ ಆಸಿಮ್ ಉಮರ್​ನನ್ನು ಕೊಲ್ಲಲಾಗಿದೆ ಎಂದು ಅಫ್ಘನ್​ ಸೇನೆ ತಿಳಿಸಿದೆ.

ಆಸಿಮ್ ಉಮರ್ 2014ರಲ್ಲಿ ಭಾರತೀಯ ಉಪಖಂಡದ ಅಲ್​-ಖೈದಾ ಉಗ್ರ ಸಂಘಟನೆಯನ್ನ ಕಟ್ಟಿದ್ದ. ಭಾರತ, ಮಯಾನ್ಮರ್, ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನ ನಡೆಸುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಈತನಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಲಾಗುತಿತ್ತು.

ಉತ್ತರ ಪ್ರದೇಶದಲ್ಲಿ ಜನಿಸಿದ್ದ ಆಸಿನ್ ಉಮರ್ ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ ಉಗ್ರ ಸಂಘಟನೆ ಜೊತೆ ಕೈ ಜೋಡಿಸಿದ್ದ. 2014 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ನೌಕಾ ನೆಲೆ ಮೇಲೆ ದಾಳಿ ನಡೆಸಿದ್ದ.

ABOUT THE AUTHOR

...view details