ಕೊಲಂಬೊ:ಶ್ರೀಲಂಕಾ ವಾಯುಪಡೆಯ ಕಮಾಂಡರ್ ಏರ್ ಮಾರ್ಷಲ್ ಸುದರ್ಶನ ಪತಿರಾನಾ ಅವರ ಆಹ್ವಾನದ ಮೇರೆಗೆ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಇಂದು ಕೊಲಂಬೊಗೆ ಆಗಮಿಸಿದ್ದಾರೆ. ಶ್ರೀಲಂಕಾ ವಾಯುಪಡೆ ತನ್ನ 70ನೇ ವಾರ್ಷಿಕೋತ್ಸವ ಆಚರಣೆ ಮಾಡ್ತಿದ್ದು, ಇದರ ಬೆನ್ನಲ್ಲೇ ಭದೌರಿಯಾ ಭೇಟಿ ನೀಡಿದ್ದಾರೆ.
ಶ್ರೀಲಂಕಾ ವಾಯುಪಡೆಯ 70ನೇ ವಾರ್ಷಿಕೋತ್ಸವ: ಏರ್ ಚೀಫ್ ಮಾರ್ಷಲ್ ಭದೌರಿಯಾ ಭಾಗಿ - ಶ್ರೀಲಂಕಾಗೆ ಏರ್ ಚೀಫ್ ಮಾರ್ಷಲ್ ಭದೌರಿಯಾ
ನೆರೆಯ ರಾಷ್ಟ್ರ ಶ್ರೀಲಂಕಾ ವಾಯುಪಡೆ 70ನೇ ವಾರ್ಷಿಕೋತ್ಸವ ಆಚರಣೆ ಮಾಡ್ತಿದ್ದು, ಇದರಲ್ಲಿ ಭಾರತದ ಏರ್ ಚೀಫ್ ಮಾರ್ಷಲ್ ಭಾಗಿಯಾಗಿದ್ದಾರೆ.
![ಶ್ರೀಲಂಕಾ ವಾಯುಪಡೆಯ 70ನೇ ವಾರ್ಷಿಕೋತ್ಸವ: ಏರ್ ಚೀಫ್ ಮಾರ್ಷಲ್ ಭದೌರಿಯಾ ಭಾಗಿ Sri Lanka Air Force's 70th Anniversary Celebrations](https://etvbharatimages.akamaized.net/etvbharat/prod-images/768-512-10855386-547-10855386-1614775376044.jpg)
Sri Lanka Air Force's 70th Anniversary Celebrations
ಭದೌರಿಯಾ ಭೇಟಿಯ ಭಾಗವಾಗಿ ಶ್ರೀಲಂಕಾ ವಾಯುಪಡೆ ಇಂದು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅದರಲ್ಲಿ ಏರ್ ಚೀಫ್ ಮಾರ್ಷಲ್ ಭಾಗಿಯಾಗಲಿದ್ದಾರೆ. ಇದರಲ್ಲಿ ಫ್ಲೈಪಾಸ್ಟ್ ಮತ್ತು ಏರೋಬ್ಯಾಟಿಕ್ ಪ್ರದರ್ಶನವಿದೆ. ಈ ಕಾರ್ಯಕ್ರಮದಲ್ಲಿ ಸೂರ್ಯಕಿರಣ್ ಮತ್ತು ಸಾರಂಗ್ ಏರೋಬ್ಯಾಟಿಕ್ ತಂಡಗಳು, ತೇಜಸ್ ಕೂಡ ಭಾಗವಾಗಲಿವೆ.
ಎರಡು ದಿನಗಳ ಭೇಟಿಯಲ್ಲಿ ಶ್ರೀಲಂಕಾದ ವಿವಿಧ ಗಣ್ಯರು ಮತ್ತು ಶ್ರೀಲಂಕಾದ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಭದೌರಿಯಾ ಮಾತುಕತೆ ನಡೆಸಲಿದ್ದಾರೆ. ಪ್ರಮುಖವಾಗಿ ಉಭಯ ದೇಶಗಳ ನಡುವಿನ ಗಡಿ, ವೃತ್ತಿಪರ ಮಿಲಿಟರಿ ಶಿಕ್ಷಣ ಹಾಗೂ ವಾಯುಪಡೆಯಲ್ಲಿನ ಪ್ರಮುಖ ವಿಷಯಗಳು ಚರ್ಚೆಯಾಗಲಿವೆ.