ಕರ್ನಾಟಕ

karnataka

ETV Bharat / international

ಪಾಕಿಸ್ತಾ​​​ನದ ಕುತಂತ್ರಿ ಬುದ್ಧಿ: 21 ಭಯೋತ್ಪಾದಕರಿಗೆ ಪಾಕ್​​ ಸರ್ಕಾರದಿಂದ ವಿಐಪಿ ಭದ್ರತೆ..! - ಭೂಗತ ಪಾತಕಿ ದಾವೂದ್ ಇಬ್ರಾಹಿಂ

ಪಾಕಿಸ್ತಾನ ಸರ್ಕಾರವು 21 ಭಯೋತ್ಪಾದಕರಿಗೆ, ವಿಐಪಿ ಭದ್ರತೆ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಅದರಲ್ಲಿ ಅನೇಕರು ಭಾರತಕ್ಕೆ ಬೇಕಾದವರಾಗಿದ್ದು, ಪಾಕಿಸ್ತಾನ ಅವರಿಗೆ ಆಶ್ರಯ ನೀಡುತ್ತಿದೆ.

Ahead of FATF meet, Pakistan treat 21 dreaded terrorists as VIPs
21 ಭಯೋತ್ಪಾದಕರಿಗೆ ಪಾಕ್​​ ಸರ್ಕಾರದಿಂದ ವಿಐಪಿ ಭದ್ರತೆ

By

Published : Sep 20, 2020, 5:04 PM IST

ಇಸ್ಲಾಮಾಬಾದ್: ಪಾಕಿಸ್ತಾನದ ಕುತಂತ್ರಿ ಬುದ್ಧಿ ಮತ್ತೊಮ್ಮೆ ಜಗಜ್ಜಾಹೀರಾತಾಗಿದ್ದು, ಪಾಕ್​​ ಎರಡು ಕಡೆಯ ನಿಲುವು ಮತ್ತೊಮ್ಮೆ ಸಾಬೀತಾಗಿದೆ. ದೇಶದ ಹಣಕಾಸಿನ ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಖಡ್ಗ ನೆತ್ತಿಯ ಮೇಲೆ ನೇತು ಹಾಕಿದ್ದರೂ, ಪಾಕ್ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಕೆಝಡ್​​​ಎಫ್ ಭಯೋತ್ಪಾದಕ ರಂಜೀತ್ ಸಿಂಗ್ ನೀತಾ ಸೇರಿದಂತೆ ಅನೇಕರಿಗೆ ವಿಐಪಿ ಸೇವೆಯನ್ನು ನೀಡುತ್ತಿದೆ

ಒಂದು ಕಡೆ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿಸಿ, ಇನ್ನೊಂದೆಡೆ ಅವರಿಗೆ ಧನ ಸಹಾಯ ನೀಡುತ್ತಿರುವ ಪಾಕಿಸ್ತಾನದ ಬೂಟಾಟಿಕೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ಕಳವಳ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ 21 ಭಯೋತ್ಪಾದಕರಿಗೆ ಪಾಕಿಸ್ತಾನ ಸರ್ಕಾರ ವಿಐಪಿ ಭದ್ರತೆ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಭಯೋತ್ಪಾದಕರಲ್ಲಿ ಅನೇಕರು ಭಾರತಕ್ಕೆ ಬೇಕಾದವರಾಗಿದ್ದು, ಪಾಕಿಸ್ತಾನ ಅವರಿಗೆ ಆಶ್ರಯ ನೀಡುತ್ತಿದೆ.

ABOUT THE AUTHOR

...view details