ನವದೆಹಲಿ:ದಕ್ಷಿಣ ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಗಿ ಜಮಾತ್‌ನ ಪ್ರಧಾನ ಕಚೇರಿಯಂತೆ, ಪಾಕಿಸ್ತಾನದ ರಾಯ್‌ವಿಂಡ್‌ನಲ್ಲಿರುವ ತಬ್ಲಿಗಿ ಜಮಾತ್ ಕೇಂದ್ರವೂ ಸಹ ಕೊರೊನಾ ಪ್ರಕರಣಗಳ ಹಾಟ್ಸ್ಪಾಟ್ ಆಗಿದೆ.
ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪಾಕ್‌ನ ಪಂಜಾಬ್ ಪ್ರಾಂತ್ಯದ ರಾಯ್‌ವಿಂಡ್ ನಗರವನ್ನು ಇದೀಗ ಲಾಕ್ಡೌನ್ ಮಾಡಲಾಗಿದೆ. ಅಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪಾಕ್ ಸುದ್ದಿ ಮಾಧ್ಯಮ ವರದಿ ಮಾಡಿವೆ.
ತಬ್ಲಿಗಿ ಜಮಾತ್‌ನಲ್ಲಿದ್ದ 110 ಜನರನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 41 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಇತರರ ವರದಿಗಳು ಇನ್ನಷ್ಟೇ ಬರಬೇಕಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 600 ಸದಸ್ಯರು ‘ಮರ್ಕಾಜ್’ನೊಳಗಿದ್ದರು ಎಂದು ತಿಳಿದುಬಂದಿದೆ.
ಮಾರ್ಚ್ 11ರಿಂದ 15ರವರೆಗೆ ನಡೆದ ಜಮಾತ್ ಕಾರ್ಯಕ್ರಮದಲ್ಲಿ ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಚೀನಾ, ಮಧ್ಯ ಏಷ್ಯಾದ ದೇಶಗಳು ಮತ್ತು ಭಾರತ ಸೇರಿದಂತೆ ಹಲವು ದೇಶಗಳ 500ಕ್ಕೂ ಹೆಚ್ಚು ವಿದೇಶಿಯರು ಸೇರಿ ಸಾವಿರಾರು ಜನ ಭಾಗವಹಿಸಿದ್ದರು.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಾರ್ಯಕ್ರಮಗಳ ಆಯೋಜನೆಯ ಮೇಲೆ ನಿಷೇಧ ಹೇರಿದ್ದರೂ, ಲಾಹೋರ್ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಈ ಕಾರ್ಯಕ್ರಮ ನಡೆದಿತ್ತು.