ಕಾಬೂಲ್, ಅಫ್ಘಾನಿಸ್ತಾನ:ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆದುಕೊಳ್ಳುವ ಮೊದಲೇ ದೇಶದಿಂದ ಪಲಾಯನ ಮಾಡಿದ್ದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು ಪೂರ್ತಿ ವಿವರ ತಿಳಿಯದೇ ಯಾರೂ ಕೂಡಾ ನಿರ್ಧಾರಕ್ಕೆ ಬರಬಾರದು. ನಾನು ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ರಕ್ತಪಾತವನ್ನು ನಿಲ್ಲಿಸುವ ಸಲುವಾಗಿ ಪಲಾಯನ ಮಾಡಬೇಕಾಗಿ ಬಂತು ಎಂದಿದ್ದಾರೆ.
ಸಿರಿಯಾ ಮತ್ತು ಯೆಮೆನ್ನಲ್ಲಿ ಆಗಿದ್ದಂತೆ ಕಾಬೂಲ್ನಲ್ಲಿ ರಕ್ತಪಾತ ಆರಂಭವಾಗುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಕಾಬೂಲ್ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಈಗ ನಾನು ಅಫ್ಘಾನಿಸ್ತಾನದ ಅಧ್ಯಕ್ಷನಾಗಿದ್ದರೆ, ಜನರನ್ನು ಗಲ್ಲಿಗೇರಿಸಲಾಗುತ್ತಿತ್ತು ಮತ್ತು ಇದು ನಮ್ಮ ಇತಿಹಾಸದಲ್ಲಿ ಭೀಕರ ದುರಂತವಾಗುತ್ತಿತ್ತು. ಸಾವಿಗೆ ನಾನು ಹೆದರುವುದಿಲ್ಲ ಮತ್ತು ಅಫ್ಘಾನಿಸ್ತಾನವನ್ನು ಅವಮಾನಿಸಲು ಈ ಕೆಲಸ ಮಾಡಿಲ್ಲ. ರಕ್ತಪಾತ ಮತ್ತು ಅಫ್ಘಾನಿಸ್ತಾನದ ನಾಶವನ್ನು ತಪ್ಪಿಸಲು ನನ್ನನ್ನು ಅಫ್ಘಾನಿಸ್ತಾನದಿಂದ ಹೊರಗೆ ಹೋಗಬೇಕಾಯಿತು ಎಂದು ಸಿಎನ್ಎನ್ ವರದಿ ಮಾಡಿದೆ.