ವಾಷಿಂಗ್ಟನ್: ತಾಲಿಬಾನ್ ಅನ್ನು 'ಭಯೋತ್ಪಾದಕ ಸಂಘಟನೆ' ಎಂದು ಪರಿಗಣಿಸಿರುವ ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್‌ಗಳಿಂದ ತಾಲಿಬಾನ್ ಆಧಾರಿತ ವಿಷಯಗಳನ್ನು ನಿಷೇಧಿಸಿದೆ. ತಾಲಿಬಾನ್ ಸಂಬಂಧಿತ ಎಲ್ಲಾ ಲಿಂಕ್‌ಗಳನ್ನು ತೆಗೆದು ಹಾಕುವ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.
ಫೇಸ್‌ಬುಕ್‌ನಲ್ಲಿ ತಾಲಿಬಾನ್ ಬೆಂಬಲಿತ ಚಟುವಟಿಕೆಗಳಿಗೆ ನಿಷೇಧ - ತಾಲಿಬಾನ್
ಅಫ್ಘಾನಿಸ್ತಾನವನ್ನು ಉಗ್ರ ಸಂಘಟನೆ ತಾಲಿಬಾನ್ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿರುವ ಅಮೆರಿಕದ ದೈತ್ಯ ಕಂಪೆನಿ ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತಾಲಿಬಾನ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಿಷೇಧಿಸಿದೆ.

ಅಫ್ಘಾನಿಸ್ತಾನ್ ಬಿಕ್ಕಟ್ಟು: ಫೇಸ್‌ಬುಕ್‌ನಲ್ಲಿ ತಾಲಿಬಾನ್ ಚಟುವಟಿಕೆಗಳಿಗೆ ನಿಷೇಧ
ಹಲವು ವರ್ಷಗಳಿಂದ ತಾಲಿಬಾನ್ ತನ್ನ ಕೃತ್ಯಗಳ ಬಗೆಗಿನ ಸಂದೇಶಗಳನ್ನು ಹರಡಲು ಫೇಸ್‌ಬುಕ್ ಹಾಗು ವಾಟ್ಸ್‌ಆ್ಯಪ್‌ಗಳನ್ನು ಬಳಸುತ್ತಿದೆ. ತಾಲಿಬಾನ್ ಅನ್ನು ಅಮೆರಿಕದ ಕಾನೂನಿನಡಿಯಲ್ಲಿ ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಲಾಗಿದೆ. ಅಪಾಯಕಾರಿ ಉಗ್ರ ಸಂಘಟನೆಯ ನೀತಿಗಳ ಅಡಿಯಲ್ಲಿ ಅವರನ್ನು ನಮ್ಮ ಸೇವೆಗಳಿಂದ ನಿಷೇಧಿಸಿದ್ದೇವೆ. ತಾಲಿಬಾನ್ ಅಥವಾ ಅವರ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ ಎಂದು ಫೇಸ್‌ಬುಕ್ ಬಿಬಿಸಿಗೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕಾಬೂಲ್ ರಾಯಭಾರ ಕಚೇರಿ ಸ್ಥಳಾಂತರಿಸಿದ ಭಾರತ; ವಿಶೇಷ ವಿಮಾನದಲ್ಲಿ ರಾಯಭಾರಿ, ಸಿಬ್ಬಂದಿ ವಾಪಸ್