ಕಾಬುಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 63 ಮಂದಿ ಬಲಿಯಾಗಿದ್ದಾರೆ.
ಶನಿವಾರದಂದು ಮದುವೆ ಹಾಲ್ ಒಂದರಲ್ಲಿ ಸುಸೈಡ್ ಬಾಂಬರ್ ಈ ಕೃತ್ಯ ಎಸಗಿದ್ದು, ಸ್ಫೋಟದ ವೇಳೆ ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ನೆರೆದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 180 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.