ನವದೆಹಲಿ: ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಗುವುದು ಮತ್ತು ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್ ಹೇಳಿತ್ತು. ಆದರೆ ಇದೀಗ ಹೇಳಿಕೆಗೆ ಬದಲಾವಣೆಯ ಗಾಳಿ ಬೀಸಿದೆ.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಮಹಿಳಾ ಸುದ್ದಿ ನಿರೂಪಕರನ್ನು ತಾಲಿಬಾನ್ ನಿಷೇಧಿಸಿದೆ. ಇದಾದ ಬಳಿಕ ಅವರ ಪ್ರತಿನಿಧಿಗಳನ್ನು ಆ ಹುದ್ದೆಗೆ ನೇಮಿಸಿದೆಯಂತೆ. ಖಾದಿಜಾ ಅಮೀನ್ ಎಂಬವರು ಇಲ್ಲಿನ ದೂರದರ್ಶನದ ಪ್ರಮುಖ ನಿರೂಪಕಿಯಾಗಿದ್ದು, ತಾಲಿಬಾನ್ ತನ್ನ ಮತ್ತು ಇತರ ಮಹಿಳಾ ಉದ್ಯೋಗಿಗಳನ್ನು ಅನಿರ್ದಿಷ್ಟಾವಧಿವರೆಗೆ ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.