ಕಾಬೂಲ್: ಮಾರ್ಚ್ ಒಂದೇ ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಬಾಂಬ್ ದಾಳಿ ಹಾಗೂ ಸರಣಿ ಸ್ಫೋಟದಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಸೇರಿದಂತೆ ಒಟ್ಟು 305 ಮಂದಿ ಸಾವನ್ನಪ್ಪಿದ್ದರೆ, 350 ಮಂದಿ ಗಾಯಗೊಂಡಿದ್ದಾರೆ.
ಈ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಮಾರ್ಚ್ನಲ್ಲಿ ದೇಶದಲ್ಲಿ ನಡೆದ ಸ್ಫೋಟಗಳು ಮತ್ತು ಉದ್ದೇಶಿತ ದಾಳಿಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಳವಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಫೆಬ್ರವರಿ ತಿಂಗಳಲ್ಲಿ 264 ಮಂದಿ ಮೃತಪಟ್ಟಿದ್ದರೆ, 278 ಮಂದಿ ಗಾಯಗೊಂಡಿದ್ದರು.