ಕರ್ನಾಟಕ

karnataka

ETV Bharat / international

ಈದ್ ಉಡುಗೊರೆ: 2 ಸಾವಿರ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಿದ ಅಫ್ಘನ್ ಅಧ್ಯಕ್ಷ - ಈದ್ ಉಲ್ ಫಿತರ್ ಲೇಟೆಸ್ಟ್ ನ್ಯೂಸ್

ಈದ್ ಉಲ್-ಫಿತರ್ ಅಂಗವಾಗಿ ಕದನ ವಿರಾಮ ಘೋಷಿಸಿರುವ ತಾಲಿಬಾನ್ ಕ್ರಮವನ್ನು ಸ್ವಾಗತಿಸಿರುವ ಅಫ್ಘನ್ ಅಧ್ಯಕ್ಷ ಘನಿ, 2 ಸಾವಿರ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

release 2,000 Taliban prisoners
2 ಸಾವಿರ ತಾಲಿಬಾನ್ ಕೈದಿಗಳ ಬಿಡುಗಡೆ

By

Published : May 25, 2020, 10:48 AM IST

ಕಾಬೂಲ್: ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ 2 ಸಾವಿರ ತಾಲಿಬಾನ್ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಎಂದು ಅವರ ವಕ್ತಾರ ಸಿದ್ದಿಕ್ ಸಿದ್ದಿಕಿ ತಿಳಿಸಿದ್ದಾರೆ.

ಈದ್ ಉಲ್-ಫಿತರ್ ಅಂಗವಾಗಿ ತಾಲಿಬಾನ್, ಕದನ ವಿರಾಮವನ್ನು ಘೋಷಿಸಿತು. ಈ ನಿರ್ಧಾರವನ್ನು ಸ್ವಾಗತಿಸಿದ್ದ ಘನಿ, ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವುದಾಗಿ ಘೋಷಿಸಿದ್ದರು.

ರಂಜಾನ್‌ ಹಿನ್ನೆಲೆ; 3 ದಿನ ಕದನ ವಿರಾಮ ಉಲ್ಲಂಘಿಸದಿರಲು ತಾಲಿಬಾನ್‌ ಅಫ್ಫಾನ್‌ ಸರ್ಕಾರ ನಿರ್ಧಾರ

'ಈದ್ ಸಮಯದಲ್ಲಿ ತಾಲಿಬಾನ್ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಪ್ರತಿಕ್ರಿಯೆಯಾಗಿ ಅಧ್ಯಕ್ಷ ಘನಿ 2 ಸಾವಿರ ತಾಲಿಬಾನ್ ಕೈದಿಗಳನ್ನು ಸದ್ಭಾವನೆಯ ಸೂಚಕವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಅಫ್ಘಾನಿಸ್ತಾನ ಸರ್ಕಾರ ಶಾಂತಿಯ ಪ್ರಸ್ತಾಪವನ್ನು ವಿಸ್ತರಿಸುತ್ತಿದೆ ಮತ್ತು ಶಾಂತಿ ಪ್ರಕ್ರಿಯೆ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ' ಎಂದು ಸಿದ್ದಿಕಿ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ 29 ರಂದು, ಅಮೆರಿಕ ಮತ್ತು ತಾಲಿಬಾನ್ ಕತಾರ್ ರಾಜಧಾನಿ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ABOUT THE AUTHOR

...view details