ಅಫ್ಘಾನಿಸ್ತಾನ: ಭಾರತದಲ್ಲಿ ಬಸ್, ರೈಲಿನ ಮೇಲೆಲ್ಲಾ ಕುಳಿತು ಜನರು ಪ್ರಯಾಣಿಸಿರುವುದನ್ನು ನೋಡಿದ್ದೇವೆ. ಆದ್ರೆ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸಕ್ಕೆ ಹೆದರಿ ವಿಮಾನದ ರೆಕ್ಕೆ, ಟೈರ್, ಟಾಪ್ ಮೇಲೆ ಜನಸಮೂಹ ಏರಿ ಕುಳಿತಿರುವ ದೃಶ್ಯ ಮನಕಲಕುವಂತಿದೆ.
ಹೌದು, ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ಅಲ್ಲಿ ಅರಾಜಕತೆಯೇ ಸೃಷ್ಟಿಯಾಗಿದೆ. ತಾಲಿಬಾನಿಗಳು ತಮ್ಮ ಮೇಲೆ ಕ್ರೌರ‍್ಯ ಮೆರೆಯಬಹುದು ಎಂಬ ಭೀತಿಯಿಂದ ಕಾಬೂಲ್ ಜನರು ವಿಮಾನ ನಿಲ್ದಾಣಕ್ಕೆ ಓಡಿ ಬಂದು ಸಿಕ್ಕಸಿಕ್ಕ ವಿಮಾನಗಳಲ್ಲಿ ಹತ್ತಿ ಕುಳಿತು ದೇಶದಿಂದ ಪಲಾಯನಗೈಯಲು ಯತ್ನಿಸುತ್ತಿದ್ದಾರೆ.
ವಿಮಾನ ನಿಲ್ದಾಣದ ಮೂಲಕ ಸಂಚರಿಸುತ್ತಿರುವ ದೃಶ್ಯಗಳು ಆ ದೇಶದಲ್ಲಿ ಪರಿಸ್ಥಿತಿ ಅದ್ಯಾವ ಮಟ್ಟಿಗೆ ಹದಗೆಟ್ಟಿದೆ ಅನ್ನುವುದಕ್ಕೆ ಕೈಗನ್ನಡಿ ಹಿಡಿದಂತಿದೆ. ಇದುವರೆಗೆ ಕಂಡು ಕೇಳರಿಯದ ರೀತಿಯ ಪಲಾಯನ ದೃಶ್ಯಗಳು ಮನಕಲಕುವಂತಿವೆ.
ತಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿ, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದರ ರೆಕ್ಕೆ ಮೇಲೆ ಜನಸಮೂಹವೇ ಕುಳಿತು ಪ್ರಯಾಣಿಸಿದ ವಿಡಿಯೋ ಇದಾಗಿದೆ. ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬ ಈ ವಿಡಿಯೋ ಮಾಡಿದ್ದು, ಸಾವಿರಾರು ಮಂದಿ ನಿಲ್ದಾಣದಲ್ಲೇ ಕಾಯುತ್ತ ನಿಂತಿದ್ದರು. ಈ ದೃಶ್ಯವನ್ನು ವಿಡಿಯೋದಲ್ಲಿ ನಾವು ನೋಡಬಹುದು.
ಇದನ್ನೂ ಓದಿ:'ಎಷ್ಟೇ ಭರವಸೆ ನೀಡಿದರೂ ಭಯಾನಕ ಇತಿಹಾಸ ಕಣ್ಣೆದುರಿಗಿದೆ': ಅಫ್ಘನ್ ಮಹಿಳೆಯರ ಮನದ ಮಾತು