ಕರ್ನಾಟಕ

karnataka

ತಾಲಿಬಾನ್ ಸ್ವಾಧೀನದ ನಂತರ ಮೊದಲ ಬಾರಿಗೆ ಚಟುವಟಿಕೆ ಪುನಾರಂಭಿಸಿದ ಆಫ್ಘನ್ ಮಾಧ್ಯಮ

By

Published : Oct 3, 2021, 7:53 PM IST

ಅಫ್ಘಾನಿಸ್ತಾನದ ಎಲ್ಲಾ ಮಾಧ್ಯಮಗಳು ತಮ್ಮ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಆಫ್ಘನ್ ಪತ್ರಕರ್ತರ ಸುರಕ್ಷತಾ ಸಮಿತಿಯು (AJSC) ತಿಳಿಸಿದೆ.

ತಾಲಿಬಾನ್ ಸ್ವಾಧೀನದ ನಂತರ ಮೊದಲ ಬಾರಿ ಚಟುವಟಿಕೆ ಪುನರಾರಂಭಿಸಿದ ಅಫ್ಘನ್ ಮಾಧ್ಯಮ
ತಾಲಿಬಾನ್ ಸ್ವಾಧೀನದ ನಂತರ ಮೊದಲ ಬಾರಿ ಚಟುವಟಿಕೆ ಪುನರಾರಂಭಿಸಿದ ಅಫ್ಘನ್ ಮಾಧ್ಯಮ

ಕಾಬೂಲ್: ಆಗಸ್ಟ್​ 15 ರಂದು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತಾಲಿಬಾನ್ ಉಗ್ರ ಸಂಘಟನೆ ಸ್ವಾಧೀನ ಪಡಿಸಿಕೊಂಡ ಬಳಿಕ ಇದೀಗ ಮೊದಲ ಬಾರಿ ಆಫ್ಘನ್ ಮಾಧ್ಯಮ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಪುನಾರಂಭಿಸಿವೆ.

"ದೇಶದಲ್ಲಿ ರಾಜಕೀಯ ಮತ್ತು ಸರ್ಕಾರದ ಬದಲಾವಣೆಯ ನಂತರ, ಆಫ್ಘನ್ ಪತ್ರಕರ್ತರ ಸುರಕ್ಷತಾ ಸಮಿತಿಯು (AJSC) ಕೆಲವು ಚಟುವಟಿಕೆಗಳನ್ನು ನಿಲ್ಲಿಸಿತ್ತು. ಇದೀಗ ಮತ್ತೆ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮೊದಲಿನಂತೆ ಆರಂಭಿಸಿದ್ದೇವೆ. ಪತ್ರಕರ್ತರು ಮತ್ತು ಮಾಧ್ಯಮದವರು ನಮ್ಮನ್ನು ಸಂಪರ್ಕಿಸಬಹುದು ಎಂದು ಎಜೆಎಸ್​ಸಿ ಹೇಳಿಕೆ ನೀಡಿದೆ.

ಇದನ್ನೂ ಓದಿ: ತಾಲಿಬಾನಿಗಳಿಂದ ಆತ್ಮಾಹುತಿ​ ಬಾಂಬರ್​ಗಳ 'ಮನ್ಸೂರ್ ಸೇನೆ' ಸೃಷ್ಟಿ: ಗಡಿಗಳಲ್ಲಿ ನಿಯೋಜನೆ

ಅಫ್ಘಾನಿಸ್ತಾನದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವ ಆರೋಪವನ್ನು ತಾಲಿಬಾನ್ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯವು ಶನಿವಾರ ತಳ್ಳಿ ಹಾಕಿದ ಬೆನ್ನಲ್ಲೇ ಎಜೆಎಸ್​ಸಿ ಎಲ್ಲಾ ಮಾಧ್ಯಮಗಳು ತಮ್ಮ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಹೇಳಿದೆ.

ಸೆಪ್ಟೆಂಬರ್ ಆರಂಭದಲ್ಲಿ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಬಂಧನಕ್ಕೊಳಪಟ್ಟಿದ್ದ ಫೋಟೋ ಜರ್ನಲಿಸ್ಟ್ ಮುರ್ತಾಜಾ ಸಮಾದಿ ಅವರನ್ನು ತಾಲಿಬಾನ್​ ಬಿಡುಗಡೆ ಮಾಡಿರುವುದನ್ನು ಎಜೆಎಸ್​ಸಿ ಸ್ವಾಗತಿಸಿದ್ದು, ಸಚಿವಾಲಯದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ.

ABOUT THE AUTHOR

...view details