ಬೀಜಿಂಗ್:ಕೊರೊನಾ ವೈರಸ್ ಉಗಮ ಸ್ಥಾನ ಎಂಬ ಆರೋಪ ಕೇಳಿ ಬಂದ ಬಳಿಕ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಶೇಷ ತಂಡ ವುಹಾನ್ ನಗರಕ್ಕೆ ಬಂದಿಳಿದಿದೆ.
ಕೊರೊನಾ ಮೂಲ ತನಿಖೆಗಾಗಿ ಚೀನಾಗೆ ಬಂದಿಳಿದಿರುವ ತಂಡ, ವೈರಸ್ ಪತ್ತೆ ಕುರಿತು ಅಧ್ಯಯನ ನಡೆಸಲಿದೆ. 10 ಮಂದಿ ವಿಜ್ಞಾನಿಗಳು ವುಹಾನ್ ನಗರದಲ್ಲಿ 2 ವಾರಗಳ ಕ್ವಾರಂಟೈನ್ಗೆ ಒಳಗಾಗಗಲಿದ್ದು, ಬಳಿಕ ಅಧ್ಯಯನ ನಡೆಸಲಿದ್ದಾರೆ.
2019ರಲ್ಲಿ ಚೀನಾದ ಮಧ್ಯ ಭಾಗ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವೈರಸ್ ಪತ್ತೆಯಾಗಿತ್ತು. ಬಳಿಕ ಇಡೀ ಜಗತ್ತಿಗೆ ಹರಡಿ 2 ಮಿಲಿಯನ್ ಜನರ ಸಾವಿಗೆ ಕಾರಣವಾಯಿತು. ಸಿಂಗಾಪೂರ್ನಿಂದ ಹೊರಟಿರುವ ವಿಶೇಷ ತಂಡ ವುಹಾನ್ ನಗರ ತಲುಪಿದೆ. ಚೀನಾ ಸರ್ಕಾರ ಕೊರೊನಾ ತಡೆಗೆ ಕಠಿಣ ಲಾಕ್ಡೌನ್ ಜಾರಿ ಮಾಡಿತ್ತು. ಇದಾದ ಬಳಿಕವೂ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿ ಮತ್ತೆ ಲಾಕ್ಡೌನ್ ಜಾರಿ ಮಾಡಿತ್ತು.
ಇದನ್ನೂ ಓದಿ:ದೇಶದಲ್ಲಿ ನಿನ್ನೆ 16,946 ಕೋವಿಡ್ ಸೋಂಕಿತರು ಪತ್ತೆ.. 198 ಮಂದಿ ಸಾವು