ಮನಿಲಾ :ಫಿಲಿಪೈನ್ಸ್ ವಾಯುಪಡೆಯ ಸಿ -130 ವಿಮಾನವು ದಕ್ಷಿಣ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದೆ. 17 ಯೋಧರು ಸಾವನ್ನಪ್ಪಿದ್ದು, ಸುಮಾರು 40 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು, ಈ ವಿಮಾನದಲ್ಲಿ 92 ಮಂದಿ ಸೈನಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ : 17 ಸಾವು, 40 ಮಂದಿ ರಕ್ಷಣೆ - ಸುಲು ಪ್ರಾಂತ್ಯ
ಫಿಲಿಪೈನ್ಸ್ನ ಸುಲು ಪ್ರಾಂತ್ಯದ ಪರ್ವತ ಪ್ರದೇಶವಾದ ಪಟಿಕುಲ್ನ ಹಳ್ಳಿಯೊಂದರಲ್ಲಿ ವಾಯುಪಡೆಯ ವಿಮಾನ ಅಪಘಾತಕ್ಕೀಡಾದೆ. ಸದ್ಯ 40 ಯೋಧರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..
ಸೇನಾ ವಿಮಾನ ಪಥನ
ಸುಲು ಪ್ರಾಂತ್ಯದ ಪರ್ವತ ಪ್ರದೇಶವಾದ ಪಟಿಕುಲ್ನ ಹಳ್ಳಿಯೊಂದರಲ್ಲಿ ವಿಮಾನ ಅಪಘಾತಕ್ಕೀಡಾದೆ. ವಿಮಾನವು ದಕ್ಷಿಣ ಕಾಗಾಯನ್ ಡಿ ಓರೊ ನಗರದಿಂದ ಸೈನಿಕರನ್ನು ಹೊತ್ತು ಸಾಗುತ್ತಿತ್ತು. ಈ ಸೇನಾ ಪಡೆ, ಮುಸ್ಲಿಂ ಪ್ರಾಂತ್ಯವಾದ ಸುಲು ಪ್ರದೇಶದಲ್ಲಿ ಅಬು ಸಯ್ಯಫ್ ಸಂಘಟನೆಯ ಉಗ್ರರನ್ನು ಸದೆಬಡೆಯುವ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎನ್ನಲಾಗಿದೆ.
ಇನ್ನು, ಪೈಲೆಟ್ ವಿಮಾನವನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ, ಪ್ರಯೋಜನವಾಗಿಲ್ಲ. ಸದ್ಯ 40 ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated : Jul 4, 2021, 12:47 PM IST