ಕಾಬೂಲ್ (ಅಫ್ಘಾನಿಸ್ತಾನ):ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದ ಲಷ್ಕರ್ ಗಾಹ್ ನಗರದಲ್ಲಿ ಅಫ್ಘನ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 94 ತಾಲಿಬಾನ್ ಮತ್ತು ಅಲ್-ಖೈದಾ ಭಯೋತ್ಪಾದಕರ ಹತ್ಯೆಯಾಗಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಮೃತ ಉಗ್ರರ ಪೈಕಿ ತಾಲಿಬಾನ್ ರೆಡ್ ಯೂನಿಟ್ನ ಹೆಲ್ಮಂಡ್ ಪ್ರಾಂತ್ಯದ ಕಮಾಂಡರ್ ಮೌಲವಿ ಮುಬಾರಕ್ ಕೂಡ ಸೇರಿದ್ದಾನೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್ ಅಮನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:Afghan ರಾಯಭಾರಿ ಮಗಳ ಅಪಹರಿಸಿ, ಚಿತ್ರಹಿಂಸೆ: ಭದ್ರತೆ ಒದಗಿಸುವಂತೆ ಪಾಕ್ಗೆ ತಾಕೀತು
ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿದ ಬಳಿಕ ದೇಶವು ಹಿಂಸಾಚಾರದ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಅಫ್ಘನ್ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ತಾಲಿಬಾನ್ ಉಗ್ರರು ತಮ್ಮ ಆಕ್ರಮಣವನ್ನು ತೀವ್ರಗೊಳಿಸಿದ್ದಾರೆ. ಹಲವು ಜಿಲ್ಲೆಗಳ ಮೇಲೆ ಹಿಡಿತ ಸಾಧಿಸಿವೆ. 2021ರ ಮೊದಲಾರ್ಧದಲ್ಲೇ ಉಗ್ರರ ದಾಳಿಗೆ 1,659ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3,254 ಮಂದಿ ಗಾಯಗೊಂಡಿದ್ದಾರೆ.