ಕರ್ನಾಟಕ

karnataka

ETV Bharat / international

ಶಾಂತಿ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಆಫ್ಘನ್​ನಲ್ಲಿ 90 ತಾಲಿಬಾನ್​ ಉಗ್ರರ ಹತ್ಯೆ.. - ತಾಲಿಬಾ

ಇದಕ್ಕೂ ಮುನ್ನ ಅಂದರೆ ಬುಧವಾರ ಹೆಲ್ಮಂಡ್ ಪ್ರಾಂತ್ಯದಲ್ಲಿ ನಡೆಸಿದ ಏರ್​​ಸ್ಟ್ರೈಕ್​ನಲ್ಲಿ 27 ಉಗ್ರರು, ಬಾಲ್ಖ್ ಪ್ರಾಂತ್ಯದಲ್ಲಿ 31 ಮಂದಿ ಸೇರಿ ಎರಡು ದಿನಗಳಲ್ಲಿ 90ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿರುವುದಾಗಿ ಸೇನೆ ಮಾಹಿತಿ ನೀಡಿದೆ..

90 militants dead in Afghan strikes amid stalled peace talks
ಶಾಂತಿ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಅಫ್ಘನ್​ನಲ್ಲಿ 90 ತಾಲಿಬಾನ್​ ಉಗ್ರರ ಹತ್ಯೆ

By

Published : Feb 12, 2021, 12:30 PM IST

ಕಾಬೂಲ್ ​:ಶಾಂತಿ ಮಾತುಕತೆ ಸ್ಥಗಿತಗೊಂಡ ಬಳಿಕ ತಾಲಿಬಾನ್ ಉಗ್ರ ಸಂಘಟನೆ ಮೇಲೆ ವೈಮಾನಿಕ ದಾಳಿ ನಡೆಸಲು ಆಫ್ಘಾನಿಸ್ತಾನ ಸೇನೆ ಆರಂಭಿಸಿದೆ. ಕಳೆದೆರಡು ದಿನಗಳಲ್ಲಿ 90ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ.

ನಿನ್ನೆ ಬಾಲ್ಖ್ ಪ್ರಾಂತ್ಯದ ಅಕ್ಟೆಪಾ ಪ್ರದೇಶದಲ್ಲಿ ತಾಲಿಬಾನ್ ಅಡಗುತಾಣದ ಮೇಲೆ ಆಫ್ಘನ್​ ಪಡೆ ದಾಳಿ ನಡೆಸಿದೆ. ಮೂವರು ಸ್ಥಳೀಯ ಕಮಾಂಡರ್‌ಗಳು ಸೇರಿದಂತೆ 11 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೈನ್ಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಮಾವೃತ ಪ್ರದೇಶದಲ್ಲಿ ಒಂದ್ಕೊಂದು ಡಿಕ್ಕಿ ಹೊಡೆದ 130 ವಾಹನ.. ಆರು ಜನ ಸಾವು, ಅನೇಕರಿಗೆ ಗಾಯ!

ಇದಕ್ಕೂ ಮುನ್ನ ಅಂದರೆ ಬುಧವಾರ ಹೆಲ್ಮಂಡ್ ಪ್ರಾಂತ್ಯದಲ್ಲಿ ನಡೆಸಿದ ಏರ್​​ಸ್ಟ್ರೈಕ್​ನಲ್ಲಿ 27 ಉಗ್ರರು, ಬಾಲ್ಖ್ ಪ್ರಾಂತ್ಯದಲ್ಲಿ 31 ಮಂದಿ ಸೇರಿ ಎರಡು ದಿನಗಳಲ್ಲಿ 90ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿರುವುದಾಗಿ ಸೇನೆ ಮಾಹಿತಿ ನೀಡಿದೆ.

ಆಫ್ಘಾನಿಸ್ತಾನದ ಕತಾರಿ ಪ್ರಾಂತ್ಯದ ರಾಜಧಾನಿ ದೋಹಾದಲ್ಲಿ ಆಫ್ಘನ್​ ಸರ್ಕಾರ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವಿನ ಶಾಂತಿ ಮಾತುಕತೆ ಸ್ಥಗಿತಗೊಂಡಿದ್ದು, ದಾಳಿ-ಪ್ರತಿದಾಳಿಗಳು ಹೆಚ್ಚಾಗುವ ಸಾಧ್ಯತೆಯಿದೆ.

ABOUT THE AUTHOR

...view details