ಕರ್ನಾಟಕ

karnataka

ETV Bharat / international

ಸೌದಿ ಏರ್​ಪೋರ್ಟ್​ ಮೇಲೆ ಡ್ರೋನ್ ದಾಳಿ: 8 ಮಂದಿಗೆ ಗಾಯ - ಇರಾನ್​ ಬೆಂಬಲಿತ ಹೌತಿ ಬಂಡುಕೋರರು

ಕಳೆದ 24 ಗಂಟೆಗಳಲ್ಲಿ ಸೌದಿ ಅರೇಬಿಯಾದ ಅಭಾ ವಿಮಾನ ನಿಲ್ದಾಣದಲ್ಲಿ ಎರಡು ಡ್ರೋನ್ ದಾಳಿ ನಡೆದಿದೆ.

ಸೌದಿ ಏರ್​ಪೋರ್ಟ್​ ಮೇಲೆ ಡ್ರೋನ್ ದಾಳಿ
ಸೌದಿ ಏರ್​ಪೋರ್ಟ್​ ಮೇಲೆ ಡ್ರೋನ್ ದಾಳಿ

By

Published : Aug 31, 2021, 6:49 PM IST

ರಿಯಾದ್:ಸೌದಿ ಅರೇಬಿಯಾದ ಅಭಾ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ತುಂಬಿದ್ದ ಡ್ರೋನ್ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇರಾನ್​ ಬೆಂಬಲಿತ ಹೌತಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇನ್ನೂ ಹೌತಿ ಬಂಡುಕೋರರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕಳೆದ 24 ಗಂಟೆಗಳಲ್ಲಿ ಅಭಾ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಮೊದಲು ನಡೆದ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಇಂದು ನಡೆದ ಡ್ರೋನ್ ದಾಳಿಯಲ್ಲಿ 8 ಮಂದಿ ಗಾಯಗೊಳ್ಳುವ ಜೊತೆಗೆ ನಾಗರಿಕ ವಿಮಾನವೂ ಹಾನಿಗೊಳಗಾಗಿದೆ ಎಂದು ಸೌದಿ ಗೆಜೆಟ್​ ವರದಿ ಮಾಡಿದೆ.

ಇದನ್ನೂ ಓದಿ: ಯೆಮನ್‌ ಸೇನಾ ನೆಲೆ ಮೇಲೆ ಹೌತಿ ಬಂಡುಕೋರರ ದಾಳಿ: 30 ಸೈನಿಕರು ಸಾವು

ಕಳೆದ ಹಲವು ತಿಂಗಳುಗಳಲ್ಲಿ ಹೌತಿ ಬಂಡುಕೋರರು ಪದೇ ಪದೆ ಸೌದಿ ಅರೇಬಿಯಾ ಮೇಲೆ ಡ್ರೋನ್ ದಾಳಿ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ಯೆಮನ್​​ನಲ್ಲಿರುವ ಸೌದಿ ನೇತೃತ್ವದ ಪಡೆಗಳಿಗೆ ಸೇರಿದ ಅತಿದೊಡ್ಡ ಸೇನಾ ನೆಲೆಯ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಸುಮಾರು 30 ಸೈನಿಕರು ಹುತಾತ್ಮರಾಗಿದ್ದರು ಮತ್ತು 60 ಮಂದಿ ಗಾಯಗೊಂಡಿದ್ದರು.

ABOUT THE AUTHOR

...view details