ಕರ್ನಾಟಕ

karnataka

ETV Bharat / international

ಎರಡು ಮ್ಯಾಗ್ನೆಟಿಕ್ ಬಾಂಬ್ ಸ್ಫೋಟ: ಏಳು ಮಂದಿಗೆ ಗಾಯ - ಕಾಬೂಲ್​ನಲ್ಲಿ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟ

ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಎರಡು ಮ್ಯಾಗ್ನೆಟಿಕ್ ಬಾಂಬ್ ಸ್ಫೋಟ ಸಂಭವಿಸಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಯಾವುದೇ ಉಗ್ರಗಾಮಿ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಎರಡು ಮ್ಯಾಗ್ನೆಟಿಕ್ ಬಾಂಬ್ ಸ್ಫೋಟ :
bomb blast rocked the Kabul

By

Published : Nov 28, 2020, 1:14 PM IST

ಕಾಬೂಲ್ (ಅಘ್ಫಾನಿಸ್ತಾನ): ಇಂದು ಬೆಳಗ್ಗೆ ಕಾಬೂಲ್ ನಗರದಲ್ಲಿ ನಡೆದ ಎರಡು ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗಳಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ಪಜ್ವೋಕ್ ಅಫಘಾನ್ ನ್ಯೂಸ್ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಘಟನೆಯಲ್ಲಿ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ. ಅಲ್ಲದೇ ಸ್ಫೋಟದ ಹೊಣೆಗಾರಿಕೆಯನ್ನು ಯಾವುದೇ ಉಗ್ರಗಾಮಿ ಗುಂಪುಗಳು ಹೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜೂನ್. 27 ರಂದು ನಗರದಲ್ಲಿ ಬಾಂಬ್​ ಸ್ಫೋಟ ನಡೆದಿತ್ತು. ಇದರಲ್ಲಿ ಅಫ್ಘಾನಿಸ್ತಾನ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ(ಎಐಆರ್​ಸಿ) ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದರು. ರಾಜಧಾನಿಯ ಬೊಟ್‌ಖಾಕ್‌ನಲ್ಲಿ ಬೆಳಗ್ಗೆ 7.45 ರ ಸುಮಾರಿಗೆ ಇಬ್ಬರು ಸಿಬ್ಬಂದಿ ಕೆಲಸಕ್ಕೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿತ್ತು ಎನ್ನಲಾಗುತ್ತಿದೆ.

ಮ್ಯಾಗ್ನೆಟಿಕ್ ಇಂಪ್ರೂವೈಸ್ಡ್ ಸ್ಫೋಟಕ ಸಾಧನವನ್ನು ಬಳಿಸಿ ಸಿಬ್ಬಂದಿಗಳು ಸಂಚರಿಸುತ್ತಿದ್ದ ಕಾರನ್ನು ಗುರಿಯಾಗಿಸಿಕೊಂಡು ಈ ಸ್ಫೋಟವನ್ನು ನಡೆಸಲಾಗಿತ್ತು ಎಂದು ಕಾಬೂಲ್ ಪೊಲೀಸ್ ವಕ್ತಾರ ಫಿರ್ದಾವ್ಸ್ ಫರಮಾರ್ಜ್ ಇಫೆ ಮಾಹಿತಿ ನೀಡಿದರು.

ABOUT THE AUTHOR

...view details