ಮನಿಲಾ(ಫಿಲಿಪೈನ್ಸ್):ಫಿಲಿಪೈನ್ಸ್‌ನ ಸೂರಿಗಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವ್ರತೆ ದಾಖಲಾಗಿದೆ.
ಫಿಲಿಪ್ಪಿನ್ಸ್ನ ಕಡಲಾಳದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವ್ರತೆ ದಾಖಲು
ಪೆಸಿಫಿಕ್ ರಿಂಗ್ ಆಫ್ ಫೈರ್ ಉದ್ದಕ್ಕೂ ಇರುವ ಕಾರಣ ಫಿಲಿಪ್ಪಿನ್ಸ್ನಲ್ಲಿ ಆಗಾಗ್ಗೆ ಭೂಕಂಪನ ಆಗುವುದು ಸಹಜ. ಇಂದು ಮುಂಜಾನೆ ಸಹ ಭೂಕಂಪನ ಆಗಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.
ಭೂಕಂಪನ
ಬೆಳಗ್ಗೆ 6.37ಕ್ಕೆ ಕಡಲಾಳದಲ್ಲಿ ಸಂಭವಿಸಿದ ಭೂಕಂಪನವು ಸ್ಯಾನ್ ಅಗಸ್ಟಿನ್ ಪಟ್ಟಣದ ಆಗ್ನೇಯಕ್ಕೆ 29 ಕಿ.ಮೀ ದೂರದಲ್ಲಿ, 33 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಫಿಲಿಪ್ಪಿನ್ಸ್ ಇನ್ಸ್ಟಿಟ್ಯೂಟ್ ಆಫ್ ಸೀಸ್ಮಾಲಜಿ ಅಂಡ್ ವಾಲ್ಕೆನೋಲಜಿ (ಫಿವೊಲ್ಕ್ಸ್) ತಿಳಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಭೂಕಂಪನದ ಬಳಿಕ ಯಾವುದೇ ಹಾನಿ ಅಥವಾ ಆಘಾತಗಳ ಬಗ್ಗೆ ವರದಿಯಾಗಿಲ್ಲ.