ಬೀಜಿಂಗ್:ಬುಧವಾರ ರಾತ್ರಿ ಎರಡು ನಿಮಿಷಗಳ ಅಂತರಲ್ಲಿ ಎರಡು ಭೂಕಂಪಗಳು ಸಂಭವಿಸಿರುವ ಘಟನೆ ಚೀನಾದ ತೈವಾನ್ನಲ್ಲಿ ನಡೆದಿದೆ. ತೈವಾನ್‌ನ ಟೈಡಾಂಗ್ ಕೌಂಟಿ ಮತ್ತು ಹುವಾಲಿಯನ್ ಕೌಂಟಿಯಲ್ಲಿ ಪ್ರಬಲ ಭೂಕಂಪಗಳ ಸಂಭವಿಸಿವೆ ಎಂದು ಚೀನಾ ಭೂಕಂಪನ ನೆಟ್‌ವರ್ಕ್ ಕೇಂದ್ರ ತಿಳಿಸಿದೆ. ಹೌದು, ಇಂದು ಬೆಳಗ್ಗೆ 1:41 ಗಂಟೆಗೆ ತೈವಾನ್‌ನ ಟೈಡಾಂಗ್ ಕೌಂಟಿಯಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 23.45 ಡಿಗ್ರಿ ಉತ್ತರ ಮತ್ತು 20 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಚೀನಾ ಭೂಕಂಪನ ನೆಟ್‌ವರ್ಕ್ ಕೇಂದ್ರ (CENC) ತಿಳಿಸಿದೆ.
ಎರಡೇ ನಿಮಿಷದಲ್ಲಿ ಎರಡು ಕಡೆ ಪ್ರಬಲ ಭೂಕಂಪ.. ನಿದ್ದೆಗೆ ಜಾರಿದ ಜನರಲ್ಲಿ ಹುಟ್ಟಿದ ನಡುಕ! - ಹುವಾಲಿಯನ್ ಕೌಂಟಿಯಲ್ಲಿ ಪ್ರಬಲ ಭೂಕಂಪ
ಎರಡೇ ನಿಮಿಷಗಳ ಅಂತರದಲ್ಲಿ ಎರಡು ಕಡೆ ಪ್ರಬಲ ಭೂಕಂಪ ಸಂಭವಿಸಿರುವ ಘಟನೆ ನೆರೆ ರಾಷ್ಟ್ರವಾದ ಚೀನಾದಲ್ಲಿ ನಡೆದಿದೆ.
ಎರಡೇ ನಿಮಿಷದಲ್ಲಿ ಎರಡು ಕಡೆ ಪ್ರಬಲ ಭೂಕಂಪ
ಓದಿ:ದಲಿತ ಯುವಕನ ಮೇಲೆ ಹಲ್ಲೆ: ಆ್ಯಸಿಡ್ನಿಂದ ಹಣೆ ಮೇಲೆ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ
ಅದೇ ರೀತಿ 1:43ಕ್ಕೆ ಹುವಾಲಿಯನ್ ಕೌಂಟಿಯಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಭೂಕಂಪನ ನೆಟ್‌ವರ್ಕ್ ಕೇಂದ್ರ ತಿಳಿಸಿದೆ. ಭೂಕಂಪನದ ಕೇಂದ್ರ ಬಿಂದು 23.50 ಡಿಗ್ರಿ ಉತ್ತರದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ತಿಳಿಸಿದೆ. ಇನ್ನು ಸಾವು - ನೋವುಗಳ ಸೇರಿದಂತೆ ಇನ್ನಿತರ ಮಾಹಿತಿ ಲಭ್ಯವಾಗಬೇಕಾಗಿದೆ. ಇದೇ ತೈವಾನ್ನಲ್ಲಿ 1999ರಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಅದರಲ್ಲಿ 2400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.