ಆಕ್ಲೆಂಡ್ (ನ್ಯೂಜಿಲೆಂಡ್):ನ್ಯೂಜಿಲ್ಯಾಂಡ್ನಲ್ಲಿ ಇಂದು ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.
ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ 9 ಕಿ.ಮೀ ದೂರ ಹಾಗೂ 181 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಕಳೆದೊಂದು ವಾರದಿಂದ ದೇಶದಲ್ಲಿ ಒಟ್ಟು ಮೂರು ಬಾರಿ ಭೂಮಿ ಕಂಪಿಸಿದೆ. ಗುರುವಾರ 7.3 ಹಾಗೂ 8.1 ತೀವ್ರತೆಯ ಭೂಕಂಪಕ್ಕೆ ನ್ಯೂಜಿಲ್ಯಾಂಡ್ ಸಾಕ್ಷಿಯಾಗಿತ್ತು.