ಜಕಾರ್ತಾ (ಇಂಡೋನೇಷ್ಯಾ): ಆಗ್ನೇಯ ಏಷ್ಯಾದ ರಾಷ್ಟ್ರವಾದ ಇಂಡೋನೇಷ್ಯಾದ ಜಕಾರ್ತಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಆದರೆ ಅಧಿಕಾರಿಗಳು ಸುನಾಮಿಯ ಎಚ್ಚರಿಕೆ ನೀಡಿಲ್ಲ ಎಂದು ಹವಾಮಾನ ಮತ್ತು ಜಿಯೋಫಿಸಿಕ್ಸ್ ಇಲಾಖೆ ಸ್ಪಷ್ಟನೆ ನೀಡಿದೆ.
ಗುರುವಾರ ಮುಂಜಾನೆ 3.59ಕ್ಕೆ ಗೊರೊಂಟಾಲೊ ಪ್ರಾಂತ್ಯದ ಬೊನೆಬೆಲಾಗೊ ಜಿಲ್ಲೆಯಿಂದ 71 ಕಿಲೋಮೀಟರ್ ದೂರದಲ್ಲಿರುವ ಸಮುದ್ರದಲ್ಲಿ 131 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಭೂಕಂಪನದ ತೀವ್ರತೆಗೆ ಗೊರೊಂಟಾಲೊ ನಗರದಲ್ಲಿ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ಮಾಹಿತಿ ನೀಡಿದೆ.