ಕರ್ನಾಟಕ

karnataka

ETV Bharat / international

ಸ್ಪಾಂಜ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ.. ಆರು ಮಂದಿ ದುರ್ಮರಣ - east china fire

ಪೂರ್ವ ಚೀನಾದ ಝಿಜಿಯಾಂಗ್ ಪ್ರಾಂತ್ಯದ ಸ್ಪಾಂಜ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಆರು ಜನರು ಮೃತಪಟ್ಟಿದ್ದಾರೆ.

ಆರು ಮಂದಿ ದುರ್ಮರಣ
ಆರು ಮಂದಿ ದುರ್ಮರಣ

By

Published : Sep 4, 2021, 10:22 AM IST

ಝಿಜಿಯಾಂಗ್ (ಚೀನಾ):ಪೂರ್ವ ಚೀನಾದ ಝಿಜಿಯಾಂಗ್ ಪ್ರಾಂತ್ಯದ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಆರು ಜನರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಯಾಶಾನ್ ಕೌಂಟಿಯ ಸ್ಪಾಂಜ್ ತಯಾರಿಕಾ ಘಟಕದಲ್ಲಿ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು, ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಸದ್ಯ ಪೊಲೀಸರು ಕಂಪನಿಯನ್ನು ಸೀಝ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅವಘಡಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: ಬೋಯಿಸಾರ್​ನ ಕಾರ್ಖಾನೆಯಲ್ಲಿ ಭಾರಿ ಸ್ಫೋಟ.. ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರ

ABOUT THE AUTHOR

...view details