ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ಉಗ್ರ ಗುಂಪಿನ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಪ್ರಕಟಿಸಿದೆ.
ಭದ್ರತಾ ಪಡೆ ಕಾರ್ಯಾಚರಣೆ.. ಟಿಟಿಪಿ ಸಂಘಟನೆಯ ಐವರು ಭಯೋತ್ಪಾದಕರು ಸಾವು - ತೆಹ್ರಿಕ್-ಎ-ತಾಲಿಬಾನ್
ಪಾಕಿಸ್ತಾನ ಮಿಲಿಟರಿ ಪಡೆ ಮತ್ತು ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ಉಗ್ರ ಗುಂಪಿನ ನಡೆದ ಕಾರ್ಯಾಚರಣೆಯಲ್ಲಿ ಐವರು ಟಿಟಿಪಿ ಉಗ್ರರು ಸಾವನ್ನಪ್ಪಿದ್ದಾರೆ..
ಭದ್ರತಾ ಪಡೆ ಕಾರ್ಯಾಚರಣೆ
ಈ ಕುರಿತು ಹೇಳಿಕೆಯಲ್ಲಿ ಮಾಹಿತಿ ನೀಡಿದ ಸೇನೆ, ಭದ್ರತಾ ಪಡೆಗಳು ಉತ್ತರ ವಾಜಿರಿಸ್ತಾನದ ಮಿರ್ ಅಲಿ ಮತ್ತು ಖೈಸೂರ್ ಪ್ರದೇಶಗಳಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹತ್ಯೆಗೀಡಾದವರಲ್ಲಿ ಇಬ್ಬರು ಭಯೋತ್ಪಾದಕ ಕಮಾಂಡರ್‌ಗಳು ಸೇರಿದ್ದಾರೆ ಎಂದು ತಿಳಿಸಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಉತ್ತರ ವಾಜಿರಿಸ್ತಾನದಲ್ಲಿ ಪಾಕಿಸ್ತಾನ ಮಿಲಿಟರಿ ಪಡೆ ಮತ್ತು ಉಗ್ರಗಾಮಿ ಗುಂಪಿನ ನಡುವೆ ದಾಳಿ ನಡೆದಿದ್ದು, ಈ ವೇಳೆ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.