ಜಕಾರ್ತಾ:ಸಾಲು ಸಾಲು ಭೂಕಂಪನಗಳಿಗೆ ಇಂಡೋನೇಷ್ಯಾ ತತ್ತರಿಸಿದೆ. ಇದೀಗ ಮತ್ತೆ ಪೂರ್ವ ಪ್ರಾಂತ್ಯದ ಮಾಲುಕು ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.
ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪನ: 5.9ರಷ್ಟು ತೀವ್ರತೆ ದಾಖಲು - ಜಕಾರ್ತಾದಲ್ಲಿ ಭೂಕಂಪನ
ಇಂಡೋನೇಷ್ಯಾದ ಮಾಲುಕು ಪ್ರದೇಶದಲ್ಲಿ ಇಂದು ನಸುಕಿನ ಜಾವ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ.
ಇಂಡೋನೇಷ್ಯಾ
ಜಕಾರ್ತಾ ಟೈಮ್ (18.42 ಜಿಎಂಟಿ ಶನಿವಾರ) ಪ್ರಕಾರ, ಭಾನುವಾರ ನಸುಕಿನ ಜಾವ 1:42 ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅಂಬೊನ್‌ನಿಂದ ದಕ್ಷಿಣಕ್ಕೆ 163 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ: ಜಾಗತಿಕ ತಾಪಮಾನ ಎಫೆಕ್ಟ್ : ಕರಗುತ್ತಿದೆ ಅಂಟಾರ್ಟಿಕಾದ ಹಿಮನದಿಗಳು