ಬೀಜಿಂಗ್/ಚೀನಾ: ಚೀನಾದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. 5.3 ತೀವ್ರತೆಯ ಭೂಕಂಪನ ಉಂಟಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ಚೀನಾದ ಭೂಕಂಪ ಅಧ್ಯಯನ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.
ವಾಯವ್ಯ ಚೀನಾದ ಕಿಂಗ್ಹೈ ಪ್ರಾಂತ್ಯದ ಮಂಗ್ಯಾ ನಗರದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭಾನುವಾರ ಬೆಳಗ್ಗೆ 7:54 ಕ್ಕೆ ಭೂಮಿ ಕಂಪಿಸಿದೆ.