ಕಠ್ಮಂಡು:ಕಳೆದ ಮಧ್ಯ ರಾತ್ರಿ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭೀತಿಗೊಳಗಾದ ಜನರು ತಮ್ಮ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಮಂಗಳವಾರ ರಾತ್ರಿ 11.53 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಕಠ್ಮಂಡುವಿನಿಂದ 180 ಕಿ.ಮೀ ಪೂರ್ವದಲ್ಲಿರುವ ದೋಲಖಾ ಜಿಲ್ಲೆಯಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ.
ಕಂಪನಕ್ಕೆ ಭಯಭೀತರಾದ ನಿವಾಸಿಗಳು ರಾತ್ರಿಯಲ್ಲಿ ಬೀದಿಗೆ ಬಂದಿದ್ದರು. ಯಾವುದೇ ಆಸ್ತಿ-ಪಾಸ್ತಿ, ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ.
ಏಪ್ರಿಲ್ 25, 2015 ರಂದು 7.8 ರಷ್ಟು ತೀವ್ರತೆಯ ಭೂಕಂಪನ ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ ಸಂಭವಿಸಿತ್ತು. 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸುಮಾರು 5,00,000 ಕಟ್ಟಡಗಳಿಗೆ ಹಾನಿಯಾಗಿತ್ತು.