ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸ್ಫೋಟ: ನಾಲ್ವರು ಸಾವು, 10 ಮಂದಿಗೆ ಗಾಯ - ಡೇರಾ ಬುಗ್ತಿ ಜಿಲ್ಲೆಯಲ್ಲಿ ಬಾಂಬ್ ಬ್ಲಾಸ್ಟ್​

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟಗೊಂಡು ವಾಹನವೊಂದರಲ್ಲಿದ್ದ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

4 killed, 10 injured in blast in Balochistan's Dera Bugti district
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸ್ಫೋಟ: ನಾಲ್ವರು ಸಾವು, 10 ಮಂದಿಗೆ ಗಾಯ

By

Published : Jan 29, 2022, 6:34 AM IST

ಬಲೂಚಿಸ್ತಾನ( ಪಾಕಿಸ್ತಾನ) :ಬಲೂಚಿಸ್ತಾನ ಪ್ರಾಂತ್ಯದ ಡೇರಾ ಬುಗ್ತಿ ಜಿಲ್ಲೆಯ ಸುಯಿ ಎಂಬಲ್ಲಿರುವ ಮತ್ ಪ್ರದೇಶದಲ್ಲಿ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ, ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಧಿಕಾರಿಗಳ ಪ್ರಕಾರ, ನೆಲಬಾಂಬ್ ಸ್ಫೋಟಗೊಂಡು ವಾಹನದಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಬಲೂಚಿಸ್ತಾನ ಮುಖ್ಯಮಂತ್ರಿ ಮೀರ್ ಅಬ್ದುಲ್ ಕುದ್ದೂಸ್ ಬಿಜೆಂಜೊ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಪ್ರಾಂತ್ಯದಲ್ಲಿ ಶಾಂತಿಯನ್ನು ಹಾಳುಮಾಡಲು ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಲೂಚಿಸ್ತಾನ್ ಅವಾಮಿ ಪಾರ್ಟಿ (ಬಿಎಪಿ) ನಾಯಕ ಸರ್ಫ್​ರಾಜ್​ ಬುಗ್ತಿ ಅವರು ದಾಳಿಯನ್ನು ಖಂಡಿಸಿದ್ದು, ಬಲೂಚ್ ರಿಪಬ್ಲಿಕನ್ ಆರ್ಮಿ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆ. ಸರ್ಕಾರ ಇಂತಹ ದಾಳಿಗಳನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ಳುತ್ತದೆ ಎಂದು ಸರ್ಫ್​ರಾಜ್​ ಬುಗ್ತಿ ಪ್ರಶ್ನಿಸಿದ್ದಾರೆಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಸರ್ಫ್​ರಾಜ್​ ಬುಗ್ತಿ ಅವರ ಸೋದರ ಸಂಬಂಧಿಯೂ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಸರ್ಕಾರವು ಮುಗ್ಧ ಜನರನ್ನು ರಕ್ಷಿಸಲು ವಿಫಲವಾಗಿದೆ ಎಂದು ಸರ್ಫ್​ರಾಜ್ ಆರೋಪಿಸಿದ್ದಾರೆ.

ಇದನ್ನೂ ಓದಿ:S-400 ಕ್ಷಿಪಣಿ ಖರೀದಿ: ಭಾರತದ ಜೊತೆಗಿನ ಸಂಬಂಧವನ್ನು ರಷ್ಯಾ ಅಸ್ಥಿರಗೊಳಿಸುತ್ತಿದೆ ಎಂದ ಅಮೆರಿಕ

ABOUT THE AUTHOR

...view details