ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ 4.8 ತೀವ್ರತೆಯ ಭೂಕಂಪ - ಎನ್​ಎಸ್​​ಸಿ ಟ್ವೀಟ್​

ಪಾಕಿಸ್ತಾನದಲ್ಲಿ ಇಂದು ಮುಂಜಾನೆ 4.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು - ನೋವು ಸಂಭವಿಸಿಲ್ಲ.

4.8 magnitude earthquake hits Pakistan
ಪಾಕಿಸ್ತಾನದಲ್ಲಿ 4.8 ತೀವ್ರತೆಯ ಭೂಕಂಪ

By

Published : Oct 26, 2020, 3:29 PM IST

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.8 ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್​ಎಸ್​​ಸಿ) ಮಾಹಿತಿ ನೀಡಿದೆ.

ಇಂದು ಮುಂಜಾನೆ 4:14ಕ್ಕೆ ಭೂಕಂಪ ಉಂಟಾಗಿದ್ದು, ಭೂಕಂಪದ ಕೇಂದ್ರ ಬಿಂದು 10 ಕಿಲೋ ಮೀಟರ್​ ಆಳದಲ್ಲಿದೆ ಎಂದು ಎನ್​ಎಸ್​​ಸಿ ಟ್ವೀಟ್​ ಮಾಡಿದೆ.

ಘಟನೆಯಲ್ಲಿ ಯಾವುದೇ ಸಾವು - ನೋವು ಸಂಭವಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details