ಬೀಜಿಂಗ್:ಚೀನಾದ ಉತ್ತರದ ಪ್ರಾಂತ್ಯದಲ್ಲಿರುವ ಹೈಲಾಂಗ್‌ಜಿಯಾಂಗ್ ಪ್ರದೇಶದ ಮೀನುಗಾರಿಕಾ ದೋಣಿ ನದಿಯಲ್ಲಿ ಮಗುಚಿ ನಾಲ್ವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ.
ಕಿಕಿಹಾರ್ ನಗರದ ನದಿಯಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಅಪಘಾತ ಸಂಭವಿಸಿದ್ದು, 11 ಮಂದಿ ದೋಣಿಯಲ್ಲಿದ್ದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.