ಕರ್ನಾಟಕ

karnataka

ETV Bharat / international

ಪೊಲೀಸ್​, ಭದ್ರತಾ ಪಡೆ ಗುರಿಯಾಗಿ ಬಾಂಬ್​ ದಾಳಿ... 34 ಅಮಾಯಕರು ಬಲಿ! - ಬಾಂಬ್​ ದಾಳಿಯಲ್ಲಿ 34 ಜನರು ಸಾವು

ಪೊಲೀಸ್​ ಮತ್ತು ಭದ್ರತಾ ಪಡೆ ಗುರಿಯಾಗಿಸಿ ಉಗ್ರರು ನಡೆಸಿದ ಬಾಂಬ್​ ದಾಳಿಯಲ್ಲಿ 34 ಅಮಾಯಕರು ಬಲಿಯಾಗಿದ್ದಾರೆ.

ಕೃಪೆ: Twitter

By

Published : Jul 31, 2019, 12:39 PM IST

ಕಾಬೂಲ್​:ಅಫ್ಘಾನಿಸ್ತಾನದ ಪಶ್ಚಿಮ ಫರ್ಹಾ ಪ್ರಾಂತ್ಯದ ಕಂದಹಾರ್ - ಹೆರಾತ್ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಉಗ್ರರು ಬಾಂಬ್ ದಾಳಿ ನಡೆಸಿರುವುದರಿಂದ 34 ಅಮಾಯಕರು ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೌದು, ಭದ್ರತಾ ಪಡೆ ಮತ್ತು ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಆದ್ರೆ, ನಾಗರಿಕರು ಪ್ರಯಾಣಿಸುತ್ತಿದ್ದ ಬಸ್​ ಈ ಬಾಂಬ್​ ದಾಳಿಗೆ ಗುರಿಯಾಗಿದೆ. ಬಸ್​ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 34 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿದ ಪೊಲೀಸ್​ ಇಲಾಖೆ ಮತ್ತು ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿ ಸಹಾಯಕ್ಕೆ ಕೈ ಜೋಡಿಸಿದರು. ಬಾಂಬ್​ ದಾಳಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತಿಲ್ಲ.

ABOUT THE AUTHOR

...view details