ಕರ್ನಾಟಕ

karnataka

ETV Bharat / international

ಟ್ರಕ್​ಗೆ ಬಸ್​ ಡಿಕ್ಕಿ: 30 ಮಂದಿ ದುರ್ಮರಣ..40 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ - ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ

ಪಾಕಿಸ್ತಾನದ ಲಾಹೋರ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.

ಟ್ರಕ್​ಗೆ ಬಸ್​ ಡಿಕ್ಕಿ
ಟ್ರಕ್​ಗೆ ಬಸ್​ ಡಿಕ್ಕಿ

By

Published : Jul 19, 2021, 1:17 PM IST

ಲಾಹೋರ್ (ಪಾಕಿಸ್ತಾನ): ಟ್ರಕ್​ಗೆ ಬಸ್​ ಡಿಕ್ಕಿ ಹೊಡೆದು 30 ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಡೇರಾದ ಹೆದ್ದಾರಿಯಲ್ಲಿ ನಡೆದಿದೆ. ಈದ್​​ ಉಲ್​ ಅಝಾ ಆಚರಿಸಲು ಸುಮಾರು 70 ಕಾರ್ಮಿಕರು ತಮ್ಮೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್​​​​ನಲ್ಲಿದ್ದ ಹೆಚ್ಚಿನವರು ತಮ್ಮ ಹಬ್ಬ ಆಚರಿಸಲು ತಮ್ಮ ಊರುಗಳಿಗೆ ಮರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ, ಡೇರಾ ಘಾಜಿ ಖಾನ್​ ಬಳಿ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಂಗಿ ಮೇಲೆ ಅತ್ಯಾಚಾರ, ಅಕ್ಕನೊಂದಿಗೆ ಮದುವೆ, ತಂದೆಗೆ ಕಟ್ಟು ಕಥೆ...ಒಂದೇ ಕುಟುಂಬಕ್ಕೆ ಮೂರು ನಾಮ ಎಳೆದ ಪಾಪಿ!

ಘಟನೆಗೆ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಮತ್ತು ಆಂತರಿಕ ಸಚಿವ ಶೇಖ್ ರಶೀದ್ ಸಂತಾಪ ಸೂಚಿಸಿದ್ದಾರೆ. ರಸ್ತೆಗಳು ಹಾಳಾಗಿದ್ದು, ತರಬೇತಿ ಪಡೆಯದ ಚಾಲಕರಿಂದ ಇಂಥ ದುರ್ಘಟನೆಗಳು ಸಂಭವಿಸುತ್ತವೆ ಎನ್ನಲಾಗಿದೆ.

ABOUT THE AUTHOR

...view details