ಸಿಂಧ್(ಪಾಕಿಸ್ತಾನ):ಸಿಂಧ್ ಪ್ರಾಂತ್ಯದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರ ರೈಲು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಎಕ್ಸ್‌ಪ್ರೆಸ್ ರೈಲು ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದಾಗ ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದ್ದು ಬಸ್ ಮೂರು ತುಂಡಾಗಿದೆ ಎಂದು ವರದಿಯಾಗಿದೆ.