ಡಮಾಸ್ಕಸ್ (ಸಿರಿಯಾ):ಪಾಲ್ಮೈರ ಹಾಗೂ ಡೀರ್ ಇಜ್ ಜೋರ್ ಸಂಪರ್ಕಿಸುವ ಹೆದ್ದಾರಿಯಲ್ಲಿ ಮಿಲಿಟರಿ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಪುಟ್ನಿಕ್ ಮಿಲಿಟರಿ ಮೂಲ ತಿಳಿಸಿದೆ.
ಅಟ್-ಟ್ಯಾನ್ಫ್ ಪ್ರದೇಶದಿಂದ ಮಧ್ಯಾಹ್ನ 1.40ರ ಸುಮಾರಿಗೆ ಆಗಮಿಸಿದ ಭಯೋತ್ಪಾದಕರ ತಂಡ, ಅಲ್ - ಶೋಲಾ ಪಟ್ಟಣದ ಪಾಲ್ಮೈರ ಹಾಗೂ ಡೀರ್ ಇಜ್ ಜೋರ್ ಸಂಪರ್ಕಿಸುವ ಹೆದ್ದಾರಿಯಲ್ಲಿ ಮಿಲಿಟರಿ ಸಿಬ್ಬಂದಿ ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.