ಬಾಗ್ದಾದ್(ಇರಾಕ್):ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಇರಾನ್ ಸೇನಾ ಕಮಾಂಡರ್ ಸೊಲೇಮನಿಯನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆಗೈದ ಬಳಿಕ ಉಭಯ ರಾಷ್ಟ್ರಗಳ ನಡುವೆ ದಾಳಿ, ಪ್ರತಿದಾಳಿ ನಡೆಯುತ್ತಲೇ ಇವೆ. ಈ ಸಂಘರ್ಷದ ಮುಂದಿನ ಭಾಗವಾಗಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ ನಡೆದಿದೆ.
ಅಮೆರಿಕ ಕಚೇರಿ ಗುರಿಯಾಗಿಸಿ ರಾಕೆಟ್ ದಾಳಿ... ಇರಾನ್ ಮೇಲೆ ದೊಡ್ಡಣ್ಣನ ಆರೋಪ - 3 rockets hit near US embassy,
ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಾರ್ಯಾಲಯ ಗುರಿಯಾಗಿಸಿ ಮೂರು ರಾಕೆಟ್‌ಗಳನ್ನು ಹಾರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಇರಾನ್ ಸೇನಾ ಕಮಾಂಡರ್ ಸುಲೇಮಾನಿಯನ್ನು ಹತ್ಯೆ ಮಾಡಿದ್ದ ಅಮೆರಿಕಗೆ ಇರಾನ್ ತಿರುಗೇಟು ನೀಡುತ್ತಲೇ ಇದೆ. ಈಗ ಬಾಗ್ದಾದ್ನಲ್ಲಿ ಅತೀ ಹೆಚ್ಚು ಭದ್ರತೆ ಇರುವ ಗ್ರೀನ್ ಜೋನ್ನಲ್ಲಿರುವ ರಾಯಭಾರ ಕಚೇರಿ ಗುರಿಯಾಗಿಸಿ ದಾಳಿ ನಡೆದಿವೆ.
ಇದು ವಿಶ್ವಮಟ್ಟದಲ್ಲೇ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಇರಾನ್ ಬೆಂಬಲಿತ ಪ್ಯಾರಾ ಮಿಲಿಟರಿ ಪಡೆ ಈ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಆದ್ರೆ, ಈ ದಾಳಿಯ ಹೊಣೆಯನ್ನು ಇನ್ನೂ ಯಾರೂ ಹೊತ್ತುಕೊಂಡಿಲ್ಲ.
Last Updated : Jan 21, 2020, 12:01 PM IST