ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಪತ್ರಕರ್ತ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಬೂಲ್ನಲ್ಲಿ ಬಾಂಬ್ ಸ್ಫೋಟ: ಪತ್ರಕರ್ತ ಸೇರಿ ಮೂವರು ಸಾವು - ಕಾಬೂಲ್ ಲೇಟೆಸ್ಟ್ ನ್ಯೂಸ್
ಮಾಜಿ ಪತ್ರಕರ್ತ ಮತ್ತು ಇತರ ಇಬ್ಬರು ವ್ಯಕ್ತಿಗಳು ತೆರಳುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.
![ಕಾಬೂಲ್ನಲ್ಲಿ ಬಾಂಬ್ ಸ್ಫೋಟ: ಪತ್ರಕರ್ತ ಸೇರಿ ಮೂವರು ಸಾವು 3 killed including journalist in Kabul explosion](https://etvbharatimages.akamaized.net/etvbharat/prod-images/768-512-9462752-thumbnail-3x2-brm.jpg)
ಕಾಬೂಲ್ನಲ್ಲಿ ಬಾಂಬ್ ಸ್ಫೋಟ
ಇಂದು ಬೆಳಗ್ಗೆ 7: 30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸರು ತಿಳಿಸಿದ್ದಾರೆ. ಯಾವುದೇ ಗುಂಪು ಈವರೆಗೆ ದಾಳಿಯ ಹೊಣೆ ಹೊತ್ತಿಲ್ಲ. ಐಇಡಿಯಿಂದ ಸ್ಫೋಟ ಸಂಭವಿಸಿದ್ದು, ಮಾಜಿ ಪತ್ರಕರ್ತ ಮತ್ತು ಇತರ ಇಬ್ಬರು ವ್ಯಕ್ತಿಗಳು ತೆರಳುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.