ಜಕಾರ್ತ (ಇಂಡೋನೇಷ್ಯಾ): ಶನಿವಾರ ಮುಂಜಾನೆ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ.
ಮುಂಜಾನೆ ಸುಮಾರು 3:18ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಹಾಗೂ ಕರಂಗಾಸೆಮ್ ಜಿಲ್ಲೆಯಿಂದ ವಾಯುವ್ಯ ಭಾಗದ 8 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಭೂಕಂಪನದಿಂದ ಸುನಾಮಿಯ ಯಾವುದೇ ಆತಂಕವಿಲ್ಲ ಎಂದು ಹವಾಮಾನ ಮತ್ತು ಭೂಶಾಸ್ತ್ರ ಏಜೆನ್ಸಿ ತಿಳಿಸಿದೆ.