ಕರ್ನಾಟಕ

karnataka

ETV Bharat / international

ತಾಲಿಬಾನ್​ ದಾಳಿಗೆ 291 ಅಫ್ಘನ್ ಸೈನಿಕರು ಬಲಿ: ಸರ್ಕಾರದಿಂದ ಮಾಹಿತಿ - ಅಫ್ಘನ್ ತಾಲಿಬಾನ್ ಸಂಘರ್ಷ

ತಾಲಿಬಾನ್ 422 ದಾಳಿಗಳನ್ನು ನಡೆಸಿದ್ದು, 291 ಅಫ್ಘನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆ ಸದಸ್ಯರನ್ನು ಹತ್ಯೆ ಮಾಡಿದೆ ಎಂದು ಅಫ್ಘನ್ ಸರ್ಕಾರ ತಿಳಿಸಿದೆ.

291 Afghan soldiers dead in Taliban attacks
291 ಅಫ್ಘನ್ ಸೈನಿಕರು ಬಲಿ

By

Published : Jun 22, 2020, 4:23 PM IST

ಕಾಬೂಲ್(ಅಫ್ಘಾನಿಸ್ತಾನ): ಕಳೆದ ವಾರ ನಡೆದ ತಾಲಿಬಾನ್ ದಾಳಿಗಳಲ್ಲಿ ಕನಿಷ್ಠ 291 ಅಫ್ಘನ್ ಸೈನಿಕರು ಸಾವನ್ನಪ್ಪಿದ್ರೆ, 550 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

34 ಪ್ರಾಂತ್ಯಗಳ ಪೈಕಿ 32ರಲ್ಲಿ ತಾಲಿಬಾನ್ 422 ದಾಳಿಗಳನ್ನು ನಡೆಸಿದ್ದು, 291 ಅಫ್ಘನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆ ಸದಸ್ಯರನ್ನು ಕೊಂದು, 550 ಜನರನ್ನು ಗಾಯಗೊಳಿಸಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾವಿದ್ ಫೈಸಲ್ ತಿಳಿಸಿದ್ದಾರೆ. ಇದು 2001ರ ಅಮೆರಿಕ ಆಕ್ರಮಣದ ನಂತರ ಒಂದು ವಾರದಲ್ಲಿ ಭದ್ರತಾ ಪಡೆಗಳು ಅನುಭವಿಸಿದ ಅತಿ ಹೆಚ್ಚು ಸಾವು ನೋವು ಎಂದು ಸರ್ಕಾರ ತಿಳಿಸಿದೆ.

ಈ ಕಾರಣಕ್ಕಾಗಿ ಕಳೆದ ವಾರ ಹಿಂಸಾಚಾರದ ವಿಷಯದಲ್ಲಿ 19 ವರ್ಷಗಳಲ್ಲಿ ಅತ್ಯಂತ ಮಾರಕವಾಗಿದೆ ಎಂದು ಎನ್ಎಸ್​ಸಿ ಕಚೇರಿ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವಾರ 42 ನಾಗರಿಕರು ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ABOUT THE AUTHOR

...view details