ಕರ್ನಾಟಕ

karnataka

ETV Bharat / international

ಕೊರೊನಾಕ್ಕಿಂತ ಮಾರಕವಾದ ವದಂತಿ: ಸುಳ್ಳು ಸುದ್ದಿ ನಂಬಿ 27 ಜನ ಸಾವು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ! - ಕೊರೊನಾ ವೈರಸ್​ನ ಸುಳ್ಳು ವದಂತಿ ಸುದ್ದಿ

ಕೊರೊನಾ ವೈರಸ್​ಗಿಂತ ವದಂತಿಗಳು ಎಷ್ಟು ಮಾರಕವಾಗಿವೆ ಎಂಬುದಕ್ಕೆ ತೆಹ್ರಾನ್​ನಲ್ಲಿ ನಡೆದಿರುವ ಈ ದುರಂತವೇ ಸಾಕ್ಷಿಯಾಗಿದೆ. ಕಳ್ಳಭಟ್ಟಿ ಸೇವಿಸಿ 27 ಮಂದಿ ಸಾವನ್ನಪ್ಪಿದ್ದ್ರರೆ, 218 ಜನರ ಸ್ಥಿತಿ ಗಂಬೀರವಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಕಳ್ಳಭಟ್ಟಿ ಸೇವಿಸಿದ್ರೆ ಕೊರೊನಾ ಹರಡಲ್ಲ ಅನ್ನೋದು.

27 died from drinking industrial alcohol, 27 died from drinking industrial alcohol as cure, 27 died from drinking industrial alcohol as cure for coronavirus, ಕೊರೊನಾ ವೈರಸ್​ನ ಸುಳ್ಳು ವದಂತಿ, ಕೊರೊನಾ ವೈರಸ್​ನ ಸುಳ್ಳು ವದಂತಿಗೆ 27 ಜನ ಸಾವು, ಕೊರೊನಾ ವೈರಸ್​ನ ಸುಳ್ಳು ವದಂತಿ ಸುದ್ದಿ,
ಕೊರೊನಾಕ್ಕಿಂತ ಮಾರಕವಾದ ವದಂತಿ

By

Published : Mar 10, 2020, 8:03 PM IST

ತೆಹ್ರಾನ್(ಇರಾನ್​)​: ಕೊರೊನಾ ವೈರಸ್​ ಈಗಾಗಲೇ ನಾಲ್ಕು ಸಾವಿರ ಜನರನ್ನು ಬಲಿ ಪಡೆದಿದೆ. ಆದ್ರೆ ಈ ವೈರಸ್​ನಿಂದ ಹಬ್ಬಿದ ವದಂತಿಯಿಂದಲೂ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಹೌದು, ಕೊರೊನಾ ವೈರಸ್​ಗೆ ಕಳ್ಳಭಟ್ಟಿ ಸಾರಾಯಿ ಸಖತ್​ ಆಗಿ ಕೆಲಸ ಮಾಡುತ್ತೆಂದು ಕೆಲವರು ವದಂತಿ ಹಬ್ಬಿಸಿದ್ದರು. ಇದನ್ನು ನಂಬಿದ ಕೆಲ ಜನ ಕಳ್ಳಭಟ್ಟಿ ಸಾರಾಯಿಯನ್ನು ಕುಡಿದಿದ್ದಾರೆ. ಇದರಿಂದಾಗಿ ಇರಾನ್​ನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಕಳ್ಳಭಟ್ಟಿ ಸಾರಾಯಿ ಸೇವಿಸಿ 27 ಜನ ಬಲಿಯಾಗಿದ್ದರೆ, 218 ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂಬ ವರದಿ ಹರಿದಾಡುತ್ತಿದೆ.

ಚೀನಾ ಬಳಿಕ ಕೊರೊನಾ ವೈರಸ್​ ತೀವ್ರತೆ ಹೆಚ್ಚಾಗಿರುವುದು ಇರಾನ್​ನಲ್ಲಿ ಮಾತ್ರ. ಆ ದೇಶದಲ್ಲಿ ಇಲ್ಲಿಯವರೆಗೆ ಏಳು ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್​ ತಗುಲಿದೆ. ಸೋಮವಾರ ಒಂದೇ ದಿನಕ್ಕೆ 43 ಜನ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಸಂತ್ರಸ್ತರ ಸಾವು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜನರಲ್ಲಿ ತೀವ್ರ ಭಯ ಹುಟ್ಟಿಕೊಳ್ಳುತ್ತಿದೆ.

ಹೀಗಾಗಿ ಇಲ್ಲಿ ಕಳ್ಳಭಟ್ಟಿ ಸಾರಾಯಿ ಕೊರೊನಾ ವೈರಸ್​ಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರಿಂದ ಕೆಲ ಜನರು ‘ನಮಗೆ ಕೊರೊನಾ ವೈರಸ್​ ತಗುಲಿರಬಹುದೆಂದು ಅನುಮಾನಗೊಂಡು ಹಾಗೂ ಕೊರೊನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ’ ಕಳ್ಳಭಟ್ಟಿ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಕಳ್ಳಭಟ್ಟಿ ಸೇವನೆಯಿಂದಾಗಿ ಈ ದುರಂತ ಸಂಭವಿಸಿದ್ದು, 20 ಜನರು ಖುಜೆಸ್ತಾನ್ ಪ್ರಾಂತ್ಯ ಮತ್ತು ಏಳು ಜನ ಅಲ್ಬೋರ್ಜ್ ಪ್ರಾಂತ್ಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details