ಕಾಬೂಲ್:ಅಫ್ಘಾನಿಸ್ತಾನದ ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ಬುಧವಾರ ರಾತ್ರಿ ನಡೆದ ವೈಮಾನಿಕ ದಾಳಿಯಲ್ಲಿ 25 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 25 ತಾಲಿಬಾನ್ ಉಗ್ರರ ಹತ್ಯೆ - ತಾಲಿಬಾನ್
ಅಫ್ಘಾನಿಸ್ತಾನದ ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 25 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಒಂದು ಮಗು, ಓರ್ವ ಮಹಿಳೆ ಸೇರಿದಂತೆ ನಾಲ್ವರು ನಾಗರಿಕರು ಸಹ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ
ಬಾಲ್ಕ್ ಜಿಲ್ಲೆಯ ದಾವ್ಲತ್ ಅಬಾದ್ ಗ್ರಾಮದಲ್ಲಿ ವೈಮಾನಿಕ ದಾಳಿ ನಡೆದಿರುವುದಾಗಿ ಬಾಲ್ಕ್ ಪ್ರಾಂತ್ಯದ ರಾಜ್ಯಪಾಲರ ವಕ್ತಾರ ಮುನೀರ್ ಅಹ್ಮದ್ ಫರ್ಹಾದ್ ಹೇಳಿದ್ದಾರೆ. ಕೆಲ ಮಾಹಿತಿಯ ಪ್ರಕಾರ, ದಾಳಿಯಲ್ಲಿ ಒಂದು ಮಗು, ಓರ್ವ ಮಹಿಳೆ ಸೇರಿದಂತೆ ನಾಲ್ವರು ನಾಗರಿಕರು ಸಹ ಮೃತಪಟ್ಟಿದ್ದಾರೆ. ಆದರೆ ಫರ್ಹಾದ್ ಹಾಗೂ 209ನೇ ಶಾಹೀನ್ ಮಿಲಿಟರಿ ಪಡೆಯ ಅಧಿಕಾರಿಗಳು ಇದನ್ನು ತಳ್ಳಿ ಹಾಕಿದ್ದಾರೆ.
ಇನ್ನು ಈ ಕುರಿತು ತಾಲಿಬಾನ್ ಉಗ್ರ ಸಂಘಟನೆ ಯಾವುದೇ ಹೇಳಿಕೆ ನೀಡಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.